ದಾವಣಗೆರೆ: ಒಬ್ಬ ಬಾಲಕ, ರಾಜಸ್ಥಾನದ ಅಜ್ಮೇರ್ಗೆ ಹೋಗಿ ಬಂದ ಮೂವರು ಸೇರಿ 9 ಮಂದಿಯಲ್ಲಿ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ.

ರಾಜಸ್ಥಾನದ ಅಜ್ಮೇರ್ನಿಂದ ಈಚೆಗೆ 32 ಮಂದಿ ಬಂದಿದ್ದರು. ಅದರಲ್ಲಿ 24 ಮಂದಿಗೆ ನೆಗೆಟಿವ್ ಎಂದು ಫಲಿತಾಂಶ ಬಂದಿದ್ದರಿಂದ ಮನೆ ಸೇರಿದ್ದಾರೆ. ಉಳಿದ ಎಂಟು ಮಂದಿಯಲ್ಲಿ ಕಳೆದ ವಾರ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಉಳಿದವರ ಫಲಿತಾಂಶ ಬಂದಿರಲಿಲ್ಲ. ಅದರಲ್ಲಿ 18 ವರ್ಷದ ಯುವತಿ (ಪಿ.6155), 62 ವರ್ಷದ ವೃದ್ಧೆ (ಪಿ. 6156) ಹಾಗೂ 66 ವರ್ಷದ ವ್ಯಕ್ತಿಗೆ (ಪಿ.6157) ಸೋಂಕು ಇರುವುದು ಗುರುವಾರ ಖಚಿತಗೊಂಡಿದೆ.

ಜಾಲಿನಗರ ಪಕ್ಕದ ಇಡಬ್ಲ್ಯುಎಸ್ ಕಾಲೊನಿಯ 64 ವರ್ಷದ ವ್ಯಕ್ತಿಯ (ಪಿ.4837) ಸಂಪರ್ಕದಿಂದ ಐವರಿಗೆ ಸೋಂಕು ಬಂದಿದೆ. 27 ಮತ್ತು 38 ವರ್ಷದ ಮಹಿಳೆಯರು (ಪಿ.6151, ಪಿ.6153), 38 ಮತ್ತು 48 ವರ್ಷದ ಪುರುಷರು (ಪಿ.6152, ಪಿ.6154) ಹಾಗೂ ನಾಲ್ಕು ವರ್ಷದ ಬಾಲಕ (ಪಿ.6158) ಸೋಂಕು ಇರುವರು.

ಇದಲ್ಲದೇ ತೀವ್ರ ಉಸಿರಾಟದ ತೊಂದರೆಯಿಂದ (ಸಾರಿ) 64 ವರ್ಷ ವ್ಯಕ್ತಿಗೆ (ಪಿ.6159) ಕೊರೊನಾ ಇರುವುದು ದೃಢಗೊಂಡಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 223 ಆಗಿದೆ. ಅದರಲ್ಲಿ 168 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 49 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.