ದಾವಣಗೆರೆ: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ನಿರ್ವಹಿಸಿ ರಸವಾಗಿ ಪರಿವರ್ತಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಹಸಿ ಕಸದಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್ಜಿ) ಉತ್ಪಾದನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ.

ಪಾಲಿಕೆಯ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದರೆ ಮುಂದಿನ ಎರಡು ವರ್ಷಗಳಲ್ಲಿ ಕಸದಿಂದ ನೈಸರ್ಗಿಕ ಅನಿಲ ಉತ್ಪಾದನೆ ಕಾರ್ಯರೂಪಕ್ಕೆ ಬರಲಿದೆ. ಪ್ರತಿ ಮನೆಯಿಂದ ಸಂಗ್ರಹಿಸುವ ಹಸಿಕಸ ಇಂಧನದ ರೂಪದಲ್ಲಿ ಕೊಳವೆಗಳ ಮೂಲಕ ಅಡುಗೆ ಕೋಣೆಗೆ ಮರಳಿ ಬರಲಿದೆ.

‘ಸ್ವಚ್ಛ ಭಾರತ್ ಮಿಷನ್ –2’ರ ಅಡಿಯಲ್ಲಿ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಎನ್ಜಿ ಉತ್ಪಾದನೆಗೆ ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಭಾರತೀಯ ಅನಿಲ ಪ್ರಾಧಿಕಾರದ (ಗೇಲ್) ಮಾರ್ಗದರ್ಶನದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಎನ್ಜಿ ಉತ್ಪಾದನೆಗೆ ‘ಮಹಾನಗರ ಗ್ಯಾಸ್ ಲಿಮಿಟೆಡ್’ ಆಸಕ್ತಿ ತೋರಿದೆ. ಸಿಎನ್ಜಿ ಉತ್ಪಾದನಾ ಘಟಕ ಸಿದ್ಧಪಡಿಸಲು 21 ತಿಂಗಳ ಕಾಲಮಿತಿಯನ್ನು ಕೇಳಿದೆ.

ದಾವಣಗೆರೆ ತಾಲ್ಲೂಕಿನ ಅವರಗೊಳ್ಳ ಗ್ರಾಮದ ಸಮೀಪ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಘಟಕ 33 ಎಕರೆಯಲ್ಲಿದೆ. 16 ಎಕರೆ ವಿಸ್ತೀರ್ಣದಲ್ಲಿ ಪಾರಂಪರಿಕ ತ್ಯಾಜ್ಯ ಹರಡಿಕೊಂಡಿದೆ. 20 ವರ್ಷಗಳಿಂದ ವಿಲೇವಾರಿ ಆಗದೇ ಉಳಿದಿರುವ ಈ ಕಸವನ್ನು ಡಿಸೆಂಬರ್ ಹೊತ್ತಿಗೆ ಕರಗಿಸುವ ಪ್ರಯತ್ನ ಆರಂಭವಾಗಿದೆ. ಈ ತ್ಯಾಜ್ಯ ಹರಡಿಕೊಂಡಿರುವ 11 ಎಕರೆ ಪ್ರದೇಶದಲ್ಲಿ ಸಿಎನ್ಜಿ ಉತ್ಪಾದನಾ ಘಟಕ ನಿರ್ಮಾಣವಾಗಲಿದೆ. ನಿತ್ಯ 5 ಟನ್ ಸಿಎನ್ಜಿ ಉತ್ಪಾದನೆಯ ಗುರಿ ಹೊಂದಲಾಗಿದೆ.

‘ಅಡುಗೆ ಮತ್ತು ವಾಹನಕ್ಕೆ ಇಂಧನ ರೂಪದಲ್ಲಿ ಬಳಸುವ ನೈಸರ್ಗಿಕ ಅನಿಲ ಉತ್ಪಾದನೆಗೆ ನಿರ್ಧರಿಸಲಾಗಿದೆ. 125 ಟನ್ ಹಸಿ ಕಸವನ್ನು ಇಂಧನವಾಗಿ ಪರಿವರ್ತನೆ ಮಾಡುವ ಗುರಿ ಹೊಂದಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಲಭ್ಯವಾಗುವ 100 ಟನ್ ಹಸಿ ಕಸದಲ್ಲಿ 70 ಟನ್ ಇದಕ್ಕೆ ನೀಡಲು ಸಾಧ್ಯವಿದೆ. ಉಳಿದ ಹಸಿಕಸವನ್ನು ಹರಿಹರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಿಂದ ಪಡೆಯಲಾಗುತ್ತದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ವಿವರಿಸಿದರು.

ಮಧ್ಯಪ್ರದೇಶದ ಇಂಧೋರ್ನಲ್ಲಿ ಕಸದಿಂದ ದೊಡ್ಡ ಪ್ರಮಾಣದಲ್ಲಿ ಸಿಎನ್ಜಿ ತಯಾರಿಸಲಾಗುತ್ತಿದೆ. ಗೋವಾದಲ್ಲಿ ವಿದ್ಯುತ್ ಉತ್ಪಾದನೆಗೆ ಕಸವನ್ನು ಬಳಸಲಾಗುತ್ತಿದೆ. ಹಸಿ ಕಸದಿಂದ ಸಿಎನ್ಜಿ ಉತ್ಪಾದನೆ ಮಾಡುವ ಪ್ರಯತ್ನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯಶಸ್ವಿಯಾಗಿದೆ. 2 ಟನ್ ಹಸಿ ಕಸವನ್ನು ಇಂಧನವಾಗಿ ಪರಿವರ್ತಿಸುವ ಪ್ರಯತ್ನ ಆವರಗೊಳ್ಳದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿಯೂ ನಡೆದಿದೆ. ಇದನ್ನು ಜನರೇಟರ್ಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ.

ಹಸಿ ಕಸದಿಂದ ನೈಸರ್ಗಿಕ ಅನಿಲ ತಯಾರಿಸುವ ಪ್ರಯತ್ನ ಆರಂಭಿಸುತ್ತಿದ್ದೇವೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಇದರಿಂದ ಸಾಧ್ಯವಾಗಲಿದೆ
ರೇಣುಕಾ ಆಯುಕ್ತೆ ಮಹಾನಗರ ಪಾಲಿಕೆ

₹ 1.5 ಕೋಟಿ ಉಳಿತಾಯ

ಆವರಗೊಳ್ಳದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದಿಂದ ಗೊಬ್ಬರ ತಯಾರಿಕೆಯ ಹೊಣೆಯನ್ನು ‘ಎಂಎಸ್ಜಿಪಿ’ ಎಂಬ ಸಂಸ್ಥೆಗೆ ನೀಡಲಾಗಿದೆ. ಮಹಾನಗರ ಪಾಲಿಕೆ ಪ್ರತಿ ಟನ್ ಕಸ ನಿರ್ವಹಣೆಗೆ ₹ 232 ಶುಲ್ಕ ಪಾವತಿಸುತ್ತಿದೆ. ಕಸದಲ್ಲಿ ಇಂಧನ ತಯಾರಿಕೆ ಆರಂಭವಾದ ಬಳಿಕ ಈ ಶುಲ್ಕ ಪಾವತಿ ಸ್ಥಗಿತವಾಗಲಿದೆ. ಇದರಿಂದ ಮಹಾನಗರ ಪಾಲಿಕೆಗೆ ₹ 1.5 ಕೋಟಿ ಉಳಿತಾಯ ಆಗಲಿದೆ ಎಂದು ಅಂದಾಜಿಸಲಾಗಿದೆ. ‘ಸ್ವಚ್ಛ ಭಾರತ್ ಮಿಷನ್–1ರ ಅಡಿಯಲ್ಲಿ ಕಸ ವಿಲೇವಾರಿಗೆ ಹೊರಗುತ್ತಿಗೆ ನೀಡಲಾಗಿದೆ. ಕಸದ ಪುನರ್ಬಳಕೆ ಮತ್ತು ಗೊಬ್ಬರ ತಯಾರಿಕೆಗೆ ಪ್ರಯೋಗಗಳು ನಡೆಯುತ್ತಿವೆ. ಮೂರು ವರ್ಷದ ಗುತ್ತಿಗೆ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ಸಿಎನ್ಜಿ ಘಟಕ ಸಿದ್ಧವಾಗಲಿದೆ’ ಎಂದು ಮಹಾನಗರ ಪಾಲಿಕೆಯ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.