ದಾವಣಗೆರೆ: ಮಳೆಗಾಲ ಶುರುವಾಗಿದ್ದು, ತಂಪಾದ ವಾತಾವರಣ ತೀವ್ರವಾದಂತೆ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳೂ ಏರುಮುಖದಲ್ಲಿ ಸಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಳೆ ಸುರಿಯುವಾಗ ವಿದ್ಯುತ್ ಕಡಿತಗೊಳ್ಳುವುದು ಸಾಮಾನ್ಯವಾಗಿದ್ದು, ಕತ್ತಲಲ್ಲಿ ಮನೆಯಿಂದ ಹೊರಹೋಗುವ ಜನರು ಹಾವು ಸೇರಿದಂತೆ ವಿಷಜಂತುಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ.

2025ರ ಜನವರಿಯಿಂದ ಮೇ 25ರವರೆಗೆ ಜಿಲ್ಲೆಯಲ್ಲಿ 203 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಹಾವು ಕಡಿತಕ್ಕೆ ಒಳಗಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ. ಜೂನ್ನಲ್ಲಿ ಸಾಕಷ್ಟು ಹಾವು ಕಡಿತ ಪ್ರಕರಣಗಳು ಸಂಭವಿಸಿದ್ದು, ಜಗಳೂರು ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಹಾವು ಕಡಿತದಿಂದ ಅಸುನೀಗಿದ್ದಾಳೆ.

ಮಳೆಗಾಲದಲ್ಲಿ ಕಪ್ಪೆ, ಇಲಿಗಳ ಸಂಖ್ಯೆ ಹೆಚ್ಚಳವಾಗುವ ಕಾರಣಕ್ಕೆ ಅವುಗಳನ್ನು ತಿನ್ನಲು ಹಾವುಗಳು ಬಿಲದಿಂದ ಹೊರಬರುತ್ತವೆ. ಮಳೆಯ ವೇಳೆ ಬೆಚ್ಚನೆಯ ವಾತಾವರಣ ಅರಸಿ ಮನೆ, ಕೊಟ್ಟಿಗೆ, ಗುಡಿಸಲು ಹಾಗೂ ಕೋಳಿ ಗೂಡುಗಳನ್ನೂ ಸೇರುತ್ತವೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ, ಜನರು ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ನಾಟಿ ಔಷಧ ಬೇಡ: ಹಾವು ಕಡಿತಕ್ಕೆ ಒಳಗಾದ ತಕ್ಷಣವೇ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಗ್ರಾಮೀಣ ಭಾಗದಲ್ಲಿ ನೀಡುವ ಪಾರಂಪರಿಕ ನಾಟಿ ಔಷಧಿಯನ್ನು ಯಾವುದೇ ಕಾರಣಕ್ಕೂ ಪಡೆಯಬಾರದು. ಕೆಲವು ಪ್ರಕರಣಗಳಲ್ಲಿ ವಿಷಕಾರಿಯಲ್ಲದ ಹಾವು ಕಡಿದಾಗ ನಾಟಿ ಔಷಧಿ ಪಡೆಯುವ ರೋಗಿಗಳು ಗುಣಮುಖರಾಗಬಹುದು. ಅದನ್ನೇ ನಂಬಿಕೊಂಡು ವಿಷಕಾರಿ ಹಾವು ಕಡಿದಾಗಲೂ ನಾಟಿ ಔಷಧಿ ಮೊರೆ ಹೋಗುವುದು ಜೀವಕ್ಕೆ ಖಂಡಿತವಾಗಿಯೂ ಅಪಾಯ ತಂದೊಡ್ಡಲಿದೆ ಎಂಬುದು ವೈದ್ಯರ ಎಚ್ಚರಿಕೆ.

ಪ್ರಾಥಮಿಕ ಆರೋಗ್ಯ ಕೇಂದ್ರವೂ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಎಎಸ್ವಿ– ಆ್ಯಂಟಿ ಸ್ನೇಕ್ ವೆನಂ (ಹಾವು ಕಡಿತದ ಔಷಧಿ) ಲಭ್ಯವಿದೆ. ಪ್ರತಿ ಆಸ್ಪತ್ರೆಯಲ್ಲೂ ಕಡ್ಡಾಯವಾಗಿ ಎಎಸ್ವಿ 10 ವಯಲ್ ಲಭ್ಯ ಇರುವಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಜೂನ್ ಜುಲೈ ಹಾವುಗಳು ಸಂತಾನೋತ್ಪತ್ತಿಯ ಅವಧಿ. 40 ರಿಂದ 50 ಮೊಟ್ಟೆಗಳನ್ನಿಡುವ ಹಾವುಗಳು ಆ ಪೈಕಿ ಅರ್ಧದಷ್ಟು ಮರಿಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.
– ಪ್ರದೀಪ್ ಕುಮಾರ್, ಉರಗತಜ್ಞ

‘ವಿಳಂಬ ಮಾಡದೇ ಆಸ್ಪತ್ರೆಗೆ ತೆರಳಿ’

ನಾಗರಹಾವು ಮಂಡಲದ ಹಾವು ಕೊಳಕು ಮಂಡಲ ಕಟ್ಟು ಹಾವು ಮಾತ್ರ ವಿಷಪೂರಿತವಾಗಿವೆ. ಹಾವು ಕಡಿತದ ಶೇ 70ರಷ್ಟು ಪ್ರಕರಣಗಳಲ್ಲಿ ಸಾವು ಸಂಭವಿಸುವಷ್ಟು ತೀವ್ರತೆ ಇರುವುದಿಲ್ಲ. ಶೇ 30 ಪ್ರಕರಣಗಳಲ್ಲಿ ತೀವ್ರತರದ ಹಾವು ಕಡಿತವಾದಾಗಲೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆ. ಕಚ್ಚಿದಾಗ ಬಡಿದು ಸಾಯಿಸುವ ಉದ್ದೇಶದಿಂದ ಹಾವನ್ನು ಹುಡುಕುತ್ತಾ ಸಮಯ ವ್ಯರ್ಥ ಮಾಡಬಾರದು. ವಿಷಪೂರಿತ ಹಾವು ಕಚ್ಚಿದಾಗ ಆಸ್ಪತ್ರೆಗೆ ತೆರಳುವುದು ವಿಳಂಬವಾದಷ್ಟು ವಿಷ ದೇಹ ಸೇರಿ ಸಾವು ಸಂಭವಿಸಬಹುದು. ಹೀಗಾಗಿ ಹಾವು ಕಚ್ಚಿದ ತಕ್ಷಣವೇ ಆಂಬುಲೆನ್ಸ್ ಸೇರಿದಂತೆ ಇನ್ನಿತರ ಯಾವುದೇ ವಾಹನದ ಮೂಲಕ ಆಸ್ಪತ್ರೆಗೆ ಧಾವಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಸಲಹೆ ನೀಡಿದರು.

ಆರೋಗ್ಯ ಇಲಾಖೆ ಸಲಹೆಗಳು

ಹಾವು ಕಚ್ಚಿದಾಗ ಆತಂಕಕ್ಕೆ ಒಳಗಾಗಬಾರದು

ಪಾದರಕ್ಷೆ ಕಾಲುಂಗುರ ಬೆಲ್ಟ್ ಆಭರಣ ವಾಚ್ ಹಾಗೂ ಬಿಗಿಯಾದ ಬಟ್ಟೆ ಕಳಚಬೇಕು

ಕಚ್ಚಿದ ಜಾಗದಲ್ಲಿನ ಗಾಯವನ್ನು ಕೊಯ್ಯಬಾರದು ಏನನ್ನೂ ಹಚ್ಚಬಾರದು

ಬಾಯಿಯಿಂದ ವಿಷವನ್ನು ಹೀರುವ ಸಾಹಸ ಮಾಡಬಾರದು

ಹಾವು ಕಡಿತಕ್ಕೆ ಒಳಗಾದವರನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವು ಅಲುಗಾಡದಂತೆ ನೋಡಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.