ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಭಾರಿ ಮಳೆಯಿಂದಾಗಿ ಭತ್ತದ ಗದ್ದೆಗಳು ಜಲಾವೃತ

Last Updated 9 ಸೆಪ್ಟೆಂಬರ್ 2020, 6:29 IST
ಅಕ್ಷರ ಗಾತ್ರ

ದಾವಣಗೆರೆ: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಾನಿಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿವೆ.

ಹರಿಹರ ತಾಲ್ಲೂಕಿನ ದೇವರಬೆಳಕೆರೆ ಪಿಕಪ್ ತುಂಬಿ ಹರಿಯುತ್ತಿದ್ದು, ಐತಿಹಾಸಿಕ ಸಂತೆಬೆನ್ನೂರು ಪುಷ್ಕರಣಿಗೆ ನೀರು ಬಂದಿದೆ.

ದಾವಣಗೆರೆ ಸಮೀಪದ ಬಾಡದಲ್ಲಿ 100ಕ್ಕೂ ಹೆಚ್ಚು ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಅಣಬೇರು ಗ್ರಾಮದಲ್ಲಿ ಭತ್ತ, ತೆಂಗು, ಮೆಕ್ಕೆಜೋಳ ಬೆಳೆಗಳು ನೀರಿನಲ್ಲಿ ಮುಳುಗಿವೆ. ಮಾಯಕೊಂಡ ಹೋಬಳಿಯ ವಡೇರಹಳ್ಳಿಯಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲು ಮನೆಯವರೆಲ್ಲಾ ಹರಸಾಹಸಪಡಬೇಕಾಯಿತು.

ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ಬಳಿ 15 ಎಕೆರೆ ಗದ್ದೆ ಜಲಾವೃತವಾಗಿದ್ದು, ಭಾನುವಳ್ಳಿ ಎರಡು ಹಾಗೂ ಸಂಕ್ಲಿಪುರ ಗ್ರಾಮದಲ್ಲಿ ಒಂದು ಮನೆಗಳಿಗೆ ನೀರು ನುಗ್ಗಿದೆ. ಸಂತೇಬೆನ್ನೂರಿನಲ್ಲಿ ಮೆಕ್ಕೆಜೋಳ ಹೊಲಗಳಿಗೆ ನೀರು, ಭತ್ತದ ಗದ್ದೆಗಳಲ್ಲಿ ನಾಟಿ ಆಗಿದ್ದು, ಭಾರಿ ಪ್ರಮಾಣದ ನೀರು ಹರಿದಿದೆ.

ಚನ್ನಗಿರಿ ತಾಲ್ಲೂಕಿನ ಹಿರೇಹಳ್ಳ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಸಂಗಾಹಳ್ಳಿಯಲ್ಲಿ ಮೂರು, ಸಂತೆಬೆನ್ನೂರು ಗ್ರಾಮದಲ್ಲಿ ಎರಡು, ಬೀಮನೆರೆ, ತಣಿಗೆರೆ, ಹಲಕನಹಾಳ್ ಪಾಂಡೋಮಟ್ಟಿಗಳಲ್ಲಿ ತಲಾ ಒಂದು ಮನೆಗಳಿಗಳಿಗೆ ಹಾನಿಯಾಗಿದ್ದು ಒಟ್ಟು ₹ 3.80 ಲಕ್ಷ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT