ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಸಮೀಪದ ಜಮೀನೊಂದರಲ್ಲಿ ಮಳೆಯ ಕಾರಣಕ್ಕೆ ಭತ್ತವನ್ನು ಕಟಾವು ಮಾಡಲಾಗದೇ ಯಂತ್ರವನ್ನು ನಿಲ್ಲಿಸಿರುವುದು
ಫ್ರೂಟ್ಸ್ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ಆದೇಶಿಸಿದ್ದು ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಬೆಂಬಲ ಬೆಲೆ ಅಡಿ ನೋಂದಣಿ ಹಾಗೂ ಖರೀದಿ ದಿನಾಂಕವನ್ನೂ ವಿಸ್ತರಿಸಲು ಸರ್ಕಾರವನ್ನು ಕೋರಲಾಗಿದೆ
ಸಿದ್ರಾಮ ಮರಿಹಾಳ್ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಭತ್ತವನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಮುಚ್ಚಿಟ್ಟರೆ ಕಾವು ಬಂದು ಮೊಳಕೆಯೊಡೆಯುತ್ತಿದೆ. ಮಾರಾಟ ಮಾಡಲು ಉತ್ತಮ ದರವೂ ಸಿಗುತ್ತಿಲ್ಲ. ರೈತರ ಬದುಕು ಅತಂತ್ರವಾಗಿದ್ದು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಳ್ಳಲಿ
ಕೊಳೇನಹಳ್ಳಿ ಬಿ.ಎಂ.ಸತೀಶ್ ರೈತ ಮುಖಂಡ
ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ದಪ್ಪ ಭತ್ತ ₹ 2200 ರಿಂದ ₹ 2300 ಶ್ರೀರಾಮ ಸೋನಾ ₹ 2300 ರಿಂದ ₹ 2400 ಸೋನಾ ಮಸೂರಿ ₹ 1900ರಿಂದ ₹ 1975ರಂತೆ ಮಾರಾಟವಾಗುತ್ತಿದೆ