ದಾವಣಗೆರೆ: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು ಅ.31ಕ್ಕೆ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ 17.06 ಲಕ್ಷ ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 4,41,579 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಸಾಂಖ್ಯಿಕ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 16,98,370 ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿತ್ತು. ಇದಕ್ಕಿಂತಲೂ ಹೆಚ್ಚು ಜನರನ್ನು ಸಮೀಕ್ಷರು ಸಂಪರ್ಕಿಸಿದ್ದಾರೆ.

ಸೆ.22ರಂದು ಆರಂಭವಾದ ಸಮೀಕ್ಷೆ ಅ.7ಕ್ಕೆ ಮುಗಿಯಬೇಕಿತ್ತು. ಅ.19ರವರೆಗೆ ಅವಧಿ ವಿಸ್ತರಿಸಿದರೂ ಸಮೀಕ್ಷೆ ಪೂರ್ಣಗೊಳ್ಳಲಿಲ್ಲ. ಸಮೀಕ್ಷೆಯಿಂದ ಹೊರಗುಳಿದವರು ಹಾಗೂ ಮಾಹಿತಿ ನೀಡಲು ಸಾಧ್ಯವಾಗದಿರುವವರನ್ನು ಸಂಪರ್ಕಿಸಲು ಅ.31ರವರೆಗೆ ಗಡುವು ನೀಡಿದ ಸರ್ಕಾರ, ಶಿಕ್ಷಕರನ್ನು ಕೈಬಿಟ್ಟು ಉಳಿದ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸೂಚಿಸಿತ್ತು. ಆನ್ಲೈನ್ ಮೂಲಕ ಮಾಹಿತಿ ಹಂಚಿಕೊಳ್ಳಲು ನ.10ರವರೆಗೆ ಅವಕಾಶವಿದೆ.

‘ಶಿಕ್ಷಕರ ಬಳಿಕ ಸಮೀಕ್ಷೆಯ ಹೊಣೆಯನ್ನು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗೆ ವಹಿಸಲಾಗಿತ್ತು. ಸಮೀಕ್ಷೆಯಿಂದ ಹೊರಗುಳಿದವರು, ಮಾಹಿತಿ ನೀಡಲು ಸಾಧ್ಯವಾಗದಿರುವವರನ್ನು ಸಂಪರ್ಕಿಸಲು ಸುಲಭವಾಯಿತು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ ನೀಡಿದ್ದಾರೆ.

ಸೇರ್ಪಡೆಯಾಗಿದ್ದ ಹರಪನಹಳ್ಳಿ: ಜಿಲ್ಲೆಯಲ್ಲಿ 18,29,756 ಜನಸಂಖ್ಯೆ ಇರಬಹುದು ಎಂದು ಆರಂಭದಲ್ಲಿ ಅಂದಾಜು ಮಾಡಲಾಗಿತ್ತು. ಇದರಲ್ಲಿ ಹರಪನಹಳ್ಳಿ ತಾಲ್ಲೂಕು ಸೇರ್ಪಡೆ ಆಗಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಹರಪನಹಳ್ಳಿ ತಾಲ್ಲೂಕು ಕೈಬಿಟ್ಟ ಬಳಿಕ ಜಿಲ್ಲೆಯ ಅಂದಾಜು ಜನಸಂಖ್ಯೆ 16.98 ಲಕ್ಷಕ್ಕೆ ಇಳಿಯಿತು.

‘2015ರಲ್ಲಿ ಸಂಗ್ರಹಿಸಿದ ಅಂಕಿ–ಅಂಶಗಳ ಆಧಾರದ ಮೇರೆಗೆ ಅಂದಾಜು ಜನಸಂಖ್ಯೆ ಲೆಕ್ಕಹಾಕಲಾಗಿತ್ತು. ಆಗ ಹರಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ಈ ತಾಲ್ಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಿದ್ದರೂ ಸಮೀಕ್ಷೆಯ ಆರಂಭದಲ್ಲಿ ದಾವಣಗೆರೆಯ ಜನಸಂಖ್ಯೆಯೊಂದಿಗೆ ತಳಕುಹಾಕಲಾಗಿತ್ತು. ಸಮೀಕ್ಷೆಯ ಅಂಕಿ–ಅಂಶಗಳು ತಾಳೆಯಾಗದಿದ್ದಾಗ ಕೂಲಂಕಷವಾಗಿ ಪರಿಶೀಲಿಸಿ ಹರಪನಹಳ್ಳಿ ತಾಲ್ಲೂಕು ಕೈಬಿಡಲು ಕೋರಿಕೆ ಸಲ್ಲಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ವಿದ್ಯುತ್ ಮೀಟರ್ನ ಆರ್ಆರ್ ಸಂಖ್ಯೆ ಆಧರಿಸಿ ಜಿಲ್ಲೆಯಲ್ಲಿ 4,91,946 ಕಟ್ಟಡಗಳಿಗೆ ವಿಶಿಷ್ಟ ಮನೆ ಸಂಖ್ಯೆ (ಯುಎಚ್ಐಡಿ) ಚೀಟಿ ಅಂಟಿಸಲಾಗಿತ್ತು. ಸಮೀಕ್ಷಕರು ಭೇಟಿ ನೀಡಿದಾಗ ಈ ಕಟ್ಟಡಗಳಲ್ಲಿ ಕುಟುಂಬಗಳು ವಾಸವಾಗಿಲ್ಲ ಎಂಬುದು ಖಚಿತವಾಗಿದೆ. ಜಿಲ್ಲೆಯಲ್ಲಿ 4.41 ಲಕ್ಷ ಕುಟುಂಬಗಳು ಇರುವುದು ಸಮೀಕ್ಷೆಯಿಂದ ದೃಢಪಟ್ಟಿದೆ.

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಶೇ 100ರಷ್ಟು ಪೂರ್ಣಗೊಂಡಿದೆ. ಸರ್ಕಾರ ನಿಗದಿಪಡಿಸಿದ ಕಾಲಮಿತಿಯಲ್ಲಿ ಸಮೀಕ್ಷೆಯನ್ನು ಮುಗಿಸಲಾಗಿದೆ
ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ತಹಶೀಲ್ದಾರ್ ಸುಪರ್ದಿಗೆ ಘೋಷಣಾ ಪತ್ರ

ಸಮೀಕ್ಷೆಗೆ ಒಳಪಟ್ಟವರು ನೀಡಿದ ಘೋಷಣಾ ಪತ್ರಗಳನ್ನು ತಹಶೀಲ್ದಾರ್ ಸುಪರ್ದಿಗೆ ಒಪ್ಪಿಸಲಾಗಿದೆ. ಚುನಾವಣಾ ಮತಯಂತ್ರಗಳಂತೆ ಇವುಗಳನ್ನು ಭದ್ರಪಡಿಸಲಾಗಿದೆ. ‘ಜನರು ನೀಡಿದ ಮಾಹಿತಿಯು ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಆಯೋಗವನ್ನು ತಲುಪಿದೆ. ಸಮೀಕ್ಷಕರ ಬಳಿ ಇದ್ದ ಘೋಷಣಾ ಪತ್ರಗಳನ್ನು ಸಂಗ್ರಹಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಸೂಚನೆ ಬರುವವರೆಗೂ ಇವುಗಳನ್ನು ತಹಶೀಲ್ದಾರ್ ನಿಗಾದಲ್ಲಿ ಇಡಲಾಗುತ್ತದೆ’ ಎಂದು ಮೂಲಗಳು ವಿವರಿಸಿವೆ.

ಮಾಹಿತಿ ನಿರಾಕರಿಸಿದ 10000 ಜನ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಅತೃಪ್ತಿ ಹೊಂದಿದ್ದ ಜನರನ್ನು ಸಮೀಕ್ಷಕರು ಮನವೊಲಿಸಿದ ಬಳಿಕವೂ ಅಗತ್ಯ ಮಾಹಿತಿ ನೀಡಲು ಜಿಲ್ಲೆಯಲ್ಲಿ 10000 ಜನರು ನಿರಾಕರಿಸಿದ್ದಾರೆ. ಹೀಗೆ ನಿರಾಕರಿಸಿದ ಕುಟುಂಬಗಳ ಮಾಹಿತಿಯನ್ನೂ ಸಮೀಕ್ಷಕರು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ್ದಾರೆ. ‘ಸಮೀಕ್ಷೆಗೆ ಮಾಹಿತಿ ನೀಡುವುದು ಜನರ ಆಯ್ಕೆಯಾಗಿತ್ತು. ಮಾಹಿತಿ ಹಂಚಿಕೊಳ್ಳುವಂತೆ ಯಾರೊಬ್ಬರನ್ನೂ ಒತ್ತಾಯಿಸಿಲ್ಲ. ಸಹಮತ ಇಲ್ಲದವರು ಸಮೀಕ್ಷಕರಿಗೆ ಮಾಹಿತಿ ನಿರಾಕರಿಸಿದ್ದಾರೆ. ಇದಕ್ಕೆ ಕೆಲವರು ಘೋಷಣಾ ಪತ್ರವನ್ನೂ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.