ಶನಿವಾರ, ಸೆಪ್ಟೆಂಬರ್ 26, 2020
26 °C

ನಿಧನ ವಾರ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲವ್ವ ಗೋವಿಂದಪ್ಪ ಸೋಳoಕಿ

ಹುಬ್ಬಳ್ಳಿ: ಹಳೇ ಹುಬ್ಬಳಿಯ ರಾಘವೇಂದ್ರ ಸರ್ಕಲ್‌ನ ಒಂದನೇ ಕ್ರಾಸ್ ಗಿರಿಯಾಲ ರಸ್ತೆ ನಿವಾಸಿ ಯಲ್ಲವ್ವ ಗೋವಿಂದಪ್ಪ ಸೋಳoಕಿ (68) ಬುಧವಾರ ನಿಧನರಾದರು. ಅವರಿಗೆ ಪುತ್ರ ಇದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಶಂಕರ ಮೋಡಕ್‌

ಹುಬ್ಬಳ್ಳಿ: ಧಾರವಾಡದ ಸಂತೋಷ ನಗರ ನಿವಾಸಿ ಶಂಕರ ವಾಸುದೇವ ಮೋಡಕ್‌ (97) ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

ಪಾರ್ವತಿ ಶಿರೂರ

ಹುಬ್ಬಳ್ಳಿ: ಈಶ್ವರನಗರ ನಿವಾಸಿ ಪಾರ್ವತಿ ಗಂಗಾಧರ ಶಿರೂರ ಇತ್ತೀಚೆಗೆ ನಿಧನರಾದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.

ಶಾರದಾ ಈರೇಶನವರ

ಹುಬ್ಬಳ್ಳಿ: ಧಾರವಾಡದ ಗಾಂಧಿನಗರ ನಿವಾಸಿ ಶಾರದಾ ಶಿವಪ್ಪ ಈರೇಶನವರ (68) ನಿಧನರಾದರು. ಅವರಿಗೆ ಪತಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ದೇವಿಂದ್ರಪ್ಪ ಬಸ್ತಿ

ಹುಬ್ಬಳ್ಳಿ: ತಾಲ್ಲೂಕಿನ ವರೂರ ಗ್ರಾಮದ ದೇವಿಂದ್ರಪ್ಪ ಬಸವಂತಪ್ಪ ಬಸ್ತಿ (55) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ. ವರೂರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು