ಶುಕ್ರವಾರ, ಮಾರ್ಚ್ 31, 2023
32 °C

ದಾವಣಗೆರೆ: ‘ಅರ್ಜಿ ಇಲ್ಲದೇ ಉತ್ತಮ ಶಿಕ್ಷಕರ ಆಯ್ಕೆಗೆ ನಿರ್ಧಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆನ್‌ಲೈನ್ ಅರ್ಜಿ ಹಾಕಿ ಸನ್ಮಾನ ಸ್ವೀಕರಿಸುವ ಕಾರ್ಯದ ಬದಲು ತಾಲ್ಲೂಕಿನ ಉತ್ತಮ ಶಿಕ್ಷಕರನ್ನು ಶಿಕ್ಷಣ ಇಲಾಖೆಯಿಂದಲೇ ಗುರುತಿಸಿ ಶಿಕ್ಷಕರ ದಿನಾಚರಣೆಯೆಂದು ಸನ್ಮಾನಿಸಿ ಗೌರವಿಸುವಂತಹ ಕೆಲಸವನ್ನ ಮಾಡಲಾಗುವುದು ಎಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನ್ ಮೂರ್ತಿ ತಿಳಿಸಿದರು.

ಹೊಸಕುಂದವಾಡ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಕುಂದವಾಡ ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸಹಕಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಜಿಲ್ಲಾ ಮಟ್ಟದ ಮತ್ತು ಶಾಲಾ ಹಂತದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕೇವಲ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅದರ ಜೊತೆಗೆ ಉತ್ತಮ ಶಿಕ್ಷಕರನ್ನು ಇಲಾಖೆಯಿಂದಲೇ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸುವಂತ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಸನ್ಮಾನ ಸ್ವೀಕರಿಸಿದ ಪಿ. ಮಂಜುನಾಥ್, ಶಾಲಾ ಹಂತದ ಉತ್ತಮ ಶಿಕ್ಷಕಿ ಸನ್ಮಾನ ಸ್ವೀಕರಿಸಿದ ಟಿ.ಜಿ.ಟಿ. ಚಂದ್ರಾಕ್ಷಿ, ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ್ (ಅಣ್ಣಪ್ಪ) ಮಾತನಾಡಿದರು. ಮಂಜುನಾಥ್ ಸನ್ಮಾನದಲ್ಲಿ ಸಿಕ್ಕಿದ ನಗದು ಬಹುಮಾನ ₹ 10 ಸಾವಿರವನ್ನು ಶಾಲೆಯ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಿದರು.

ಪ್ರಾಥಮಿಕ ಮುಖ್ಯ ಶಿಕ್ಷಕ ಜಿ.ಆರ್. ರಾಘವೇಂದ್ರ ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಉಮಾದೇವಿ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್. ಲೋಕೇಶ್, ಮಾಜಿ ಅಧ್ಯಕ್ಷ ಜಯಣ್ಣ, ಸಿಆರ್‌ಪಿ ಪ್ರಕಾಶ್ ಗೌಡ್ರು, ಲಂಕೆಪ್ಪರ ಹನುಮಂತಪ್ಪ, ಸೋಮಣ್ಣ, ನಿವೃತ್ತ ಶಿಕ್ಷಕ ಗುರುಮೂರ್ತಿ, ಶಿವಲಿಂಗಪ್ಪ, ಎಚ್.ಎಸ್. ಮೋಹನ್ ಕುಮಾರ್, ಎಂ.ಜಿ. ಲತಾ, ನಿಂಗಮ್ಮ, ಡಿ. ಭಾಗ್ಯಮ್ಮ, ಕೆ.ಎಂ. ಮಲ್ಲಿಕಾರ್ಜುನಪ್ಪ, ಜಿ.ಪಿ.ಟಿ ಸಮೀರಾ ಬಾನು, ಎಸ್.ಭಾಗ್ಯಭಾರತಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.