ದಾವಣಗೆರೆ: ಲೈಸೆನ್ಸ್ರಾಜ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ತಂಬಾಕು ಉತ್ಪನ್ನಗಳ ಚಿಲ್ಲರೆ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಸಣ್ಣ ವ್ಯಾಪಾರಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಲೈಸನ್ಸ್ ರಾಜ್ ಕಾಯ್ದೆಯಿಂದ ಸಾಕಷ್ಟು ಅನನುಕೂಲಗಳಿವೆ. ಸಣ್ಣಪುಟ್ಟ ಬೀಡಿ ಅಂಗಡಿಗಳು ಮುಚ್ಚುವ ಆತಂಕದಲ್ಲಿವೆ. ಲೈಸೆನ್ಸ್ ಪಡೆಯುವುದರಿಂದ ವರ್ಷಕ್ಕೆ ₹ 2000 ಕಟ್ಟಬೇಕಿದೆ. ಇದರಿಂದ ಅಲ್ಪಸ್ವಲ್ಪ ಉಳಿಸಿದ ಹಣವೂ ವ್ಯಯವಾಗಲಿದೆ ಎಂದು ಸಂಘದ ಅಧ್ಯಕ್ಷ ರಹಮ್ಮತ್ ಉಲ್ಲಾ ಆತಂಕ ವ್ಯಕ್ತಪಡಿಸಿದರು.

ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಇದ್ದರೆ ಮಾತ್ರ ಪರವಾನಗಿ ನೀಡುವುದಾಗಿ ಪಾಲಿಕೆಯವರು ಹೇಳುತ್ತಿದ್ದಾರೆ ಇದರಿಂದ ನಮಗೆ ತೊಂದರೆಯಾಗಲಿದೆ. ಬಡವರ ಅನಕ್ಷರಸ್ಥರ, ಆರ್ಥಿಕ ದುರ್ಬಲರ ಲಾಭವನ್ನು ಪಡೆಯಲು ಅಧಿಕಾರಿಗಳಿಂದ ಮತ್ತಷ್ಟು ಕಿರುಕುಳದ ಭಯ ಉಂಟಾಗುತ್ತಿದೆ. ಇದಲ್ಲದೇ ಸಣ್ಣ ಚಿಲ್ಲರೆ ಅಂಗಡಿಗಳ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಈ
ಕಾಯ್ದೆಯಿಂದಾಗಿ ದೊಡ್ಡ ಚಿಲ್ಲರೆ ಅಂಗಡಿಗಳು, ಮಾಲ್ಗಳು ವಿದೇಶಿ ಕಂಪನಿಗಳಿಗೆ ಲಾಭವಾಗುತ್ತದೆ. ಸಾಂಕ್ರಾಮಿಕ ಸಂಬಂಧಿತ ಲಾಕ್ಡೌನ್ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ನಾವು ದೊಡ್ಡ ನಷ್ಟವನ್ನು ಅನುಭವಿಸಿದ್ದೇವೆ. ಈಗೀಗ ನಮ್ಮ ಜೀವನೋಪಾಯ ಚೇತರಿಕೆಗೊಳ್ಳುತ್ತಿದೆ. ಲೈಸನ್ಸ್ ರಾಜ್ ಕಾಯ್ದೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿ. ಪರಶುರಾಮ್, ನಾಗೇಶ್, ಸಂಗಪ್ಪ, ರಾಜು, ಕೆ.ಎಚ್. ಶಿವಯೋಗಿ, ಶಂಕರ್, ಮಾರುತಿ, ಗಂಗಾಧರ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.