ಶನಿವಾರ, ಜೂನ್ 6, 2020
27 °C

ಕೋಳಿ ಮೊಟ್ಟೆಗಳ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾಡಳಿತದ ನೇತೃತ್ವದಲ್ಲಿ ಶುಕ್ರವಾರ ನಡೆದ ನಾಗರಿಕರಿಗೆ ಕೋಳಿ ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.

ಎಸ್‌ಪಿಎಸ್ ನಗರ ಮತ್ತು ಜಾಲಿನಗರ, ಬೂದಾಳ್‌ ರಸ್ತೆಗಳಲ್ಲಿ ಸಾಂಕೇತಿಕವಾಗಿ ಕೋಳಿ ಮೊಟ್ಟೆಗಳನ್ನು ವಿತರಿಸಲಾಯಿತು.

ಕೊರೊನಾ ವೈರಸ್ ಭೀತಿಯಿಂದ ಜನರಿಗೆ ಪೌಷ್ಟಿಕಾಂಶದ ಕೊರತೆ ಆಗಬಾರದು ಎಂಬ ಸದುದ್ದೇಶದಿಂದ ಕೋಳಿ ಮೊಟ್ಟೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾನಗರ ಪಾಲಿಕೆ, ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯರಾದ ಸುಧಾ ಇಟ್ಟಿಗುಡಿ, ವಿನಾಯಕ ಪೈಲ್ವಾನ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಎನ್. ಚಂದ್ರಪ್ಪ ಇದ್ದರು. 

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ: ಮೊಟ್ಟೆ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯದೆ ಜನರು ಮುಗಿಬಿದ್ದರು. ಬಳಿಕ ಸಾಂಕೇತಿಕವಾಗಿ ಮೊಟ್ಟೆ ವಿತರಿಸಿ, ಬೂದಾಳ್‌ ರಸ್ತೆಯ ಮನೆ, ಮನೆಗೆ ಹೋಗಿ ಮೊಟ್ಟೆ ಹಂಚಲಾಯಿತು.

ಹೋಟೆಲ್‌ ಉದ್ದಿಮೆದಾರರ ಸಂಘದಿಂದ ಆಹಾರದ ಕಿಟ್‌ ವಿತರಣೆ:

ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದಿಂದ ಇಲ್ಲಿನ ಪಿ.ಬಿ. ರಸ್ತೆಯ ಅಪೂರ್ವ ಹೋಟೆಲ್‌ ಬಳಿ ಆಹಾರದ ಕಿಟ್‌ ವಿತರಿಸಲಾಯಿತು. ಅಂತರ ಕಾಯ್ದುಕೊಳ್ಳದೆ ಜನರು ಸರತಿಯಲ್ಲಿ ನಿಂತಿದ್ದರು. 

ಆಟೊದಲ್ಲಿ ಕಿಟ್‌ ತರುತ್ತಿದ್ದಂತೆ ಜನರು ಇದನ್ನು ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಬಳಿಕ ಜನರನ್ನು ಚದುರಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು