ದಾವಣಗೆರೆ: ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡೀಸ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್‌ನಿಂದ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ‘ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಒಬ್ಬರು. ಸರಳ ಸಜ್ಜನಿಕೆಯ ಆಸ್ಕರ್ ಪಕ್ಷದ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಸೋಮ್ಲಾಪುರದ ಹನುಮಂತಪ್ಪ, ಕೆಪಿಸಿಸಿ ಸದಸ್ಯರಾದ ಜಿ,ಹಚ್, ಮರಿಯೋಜಿರಾವ್, ಕೆಪಿಸಿಸಿ ಸಂಯೋಜಕರಾದ ಕೆ.ಸಿ.ಲಿಂಗರಾಜ ಅನೆಕೊಂಡ, ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಘವೇಂದ್ರ ಗೌಡ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಾಗರ್ ಎಲ್.ಎಚ್., ಜಿಲ್ಲಾ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಸೇವಾದಳದ ಜಬ್ಬಾರ್, ಹರೀಶ್ ಎಚ್., ಎಸ್ಸಿ ಘಟಕದ ರಂಗಸ್ವಾಮಿ ಅವರು ಒಡನಾಟವನ್ನು ಹಂಚಿಕೊಂಡರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಖಾಲಿದ್, ಕಿಸಾನ್ ಕಾಂಗ್ರೆಸ್ ಸುರೇಶ್ ಜಾಧವ್, ಆಟೊ ತಿಮ್ಮಣ್ಣ, ಸೈಯದ್ ಜಿಕ್ರಿಯಾ, ಮಹಮ್ಮದ್ ಬಾಷಾ, ಮಲ್ಲಿಕಾರ್ಜುನ್ ಇಂಗಳೇಶ್ವರ, ಸುಬಾನ್ ಸಾಬ್, ಶಶಿಧರ್ ಪಾಟೀಲ್, ಕೊಡಪಾನ ದಾದಾಪೀರ್ ಅವರೂ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.