ದಾವಣಗೆರೆ: ‘ವೈದ್ಯರಾಗಬಯಸುವವರಿಗೆ ಸಹಾನುಭೂತಿ ಮುಖ್ಯ’ ಎಂದು ಬೆಂಗಳೂರು ನಿಮ್ಹಾನ್ಸ್‌ನ ನ್ಯೂರೋ ವೈರಾಲಜಿ ಮುಖ್ಯಸ್ಥ ಡಾ.ರವಿ ವಿ. ಅಭಿಪ್ರಾಯಪಟ್ಟರು.
ಎಸ್.ಎಸ್.ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಠಿಣ ಶ್ರಮ ವಹಿಸಿದ್ದರಿಂದಲೇ ನೀವು ಪದವಿ ಪಡೆಯಲು ಸಾಧ್ಯವಾಗಿದೆ. ಕೊರೊನಾ ಬಳಿಕ 67 ಮಂದಿ ಪದವಿ ಪಡೆದಿದ್ದು, ಇದೊಂದು ವಿಶೇಷ ಬ್ಯಾಚ್ ಆಗಿದೆ’ ಎಂದರು.
‘ವೈದ್ಯಕೀಯ ಕಲಿಯುವವರಿಗೆ ಸಹಾನುಭೂತಿಯ ಕಲಿಕೆ ಹಾಗೂ ತರಬೇತಿ ಅಗತ್ಯ. ರೋಗಿಗಳನ್ನು ಗುಣಪಡಿಸಬೇಕಾದರೆ ಅವರ ಜೊತೆ ಹೇಗೆ ವರ್ತಿಸುತ್ತೀರಿ ಎಂಬುದು ಮುಖ್ಯ. ವೈದ್ಯರು ರೋಗಿಗಳನ್ನು ಮುಟ್ಟಿ ಮಾತನಾಡಿಸಬೇಕು. ಆಗ ರೋಗಿಗಳಿಗೆ ನಿಮ್ಮಲ್ಲಿ ನಂಬಿಕೆ ಬರುತ್ತದೆ. ರೋಗಿಗಳ ಸಮಸ್ಯೆಯನ್ನು ಆಲಿಸಿ ಅವರನ್ನು ಮಾಡಿಕೊಂಡರೆ ಶೇ 50ರಷ್ಟು ಗುಣಪಡಿಸಿದಂತೆ’ ಎಂದು ವಿಶ್ಲೇಷಿಸಿದರು.
‘ವೈದ್ಯಕೀಯ ವಿದ್ಯಾರ್ಥಿಗಳು ಕ್ಲಿನಿಕಲ್ ಕೌಶಲ ಬೆಳೆಸಿಕೊಳ್ಳಬೇಕು. ಇದು ನಿಮಗೆ ಜೀವನಪೂರ್ತಿ ಉಪಯೋಗಕ್ಕೆ ಬರುತ್ತದೆ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು. ಪ್ರಶ್ನಿಸುವ ಮನೋಭಾವ, ಹೊಣೆಗಾರಿಕೆ ಬೆಳೆಸಿಕೊಂಡರೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ’ ಎಂದು ಹೇಳಿದರು.
ಡಾ.ಪ್ರಭಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಪ್ರಸಾದ್, ಡಾ.ರವೀಂದ್ರ ಬಣಕಾರ್, ಡಾ.ಶಶಿಕಲಾ ಕೃಷ್ಣಮೂರ್ತಿ, ಅರುಣ್‌ಕುಮಾರ್ ಅಜ್ಜಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.