ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಮನ ಸೆಳೆದ ರ‍್ಯಾಂಪ್‌ ವಾಕ್‌

Published 14 ಆಗಸ್ಟ್ 2023, 4:25 IST
Last Updated 14 ಆಗಸ್ಟ್ 2023, 4:25 IST
ಅಕ್ಷರ ಗಾತ್ರ

ದಾವಣಗೆರೆ: ಜಗಮಗ ಮಿಂಚುತ್ತಿದ್ದ ವೇದಿಕೆ, ಮನಸ್ಸಿಗೆ ಮುದ ನೀಡುವ ಹಿನ್ನೆಲೆ ಸಂಗೀತ, ಆಕರ್ಷಕ ಉಡುಗೆ ಧರಿಸಿದ ವಿದ್ಯಾರ್ಥಿನಿಯರ ರ‍್ಯಾಂಪ್‌ ವಾಕ್, ಸಭಾಂಗಣದಲ್ಲಿ ಜೋರು ಚಪ್ಪಾಳೆಯ ಪ್ರೋತ್ಸಾಹ..

ನಗರದ ಹೋಟೆಲ್‌ ಪೂಜಾ ಇಂಟರ್ ನ್ಯಾಷನಲ್‌ನ ಸಭಾಂಗಣದಲ್ಲಿ ‘ಕಲಾನಿಕೇತನ ಕಾಲೇಜ್‌ ಆಫ್ ಡಿಸೈನಿಂಗ್‌’ ವತಿಯಿಂದ ಭಾನುವಾರ ನಡೆದ ಫ್ಯಾಶನ್ ಶೋ ಕಾರ್ಯಕ್ರಮದ ಝಲಕ್ ಇದು.

ಕಾಲೇಜಿನ ವಿದ್ಯಾರ್ಥಿನಿಯರು ತಾವೇ ವಿನ್ಯಾಸಗೊಳಿಸಿದ ವಿವಿಧ ಥೀಮ್‌ ಆಧಾರಿತ ವಿಭಿನ್ನ ಉಡುಗೆಗಳನ್ನು ಧರಿಸಿ ಹೆಜ್ಜೆ ಹಾಕಿದರು.

ಎಸ್.ಎಸ್‌.ಅಮೃತಾ ವಿನ್ಯಾಸಗೊಳಿಸಿದ್ದ ವಿಶೇಷ ಉಡುಪು ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನು ಬಿಂಬಿಸಿತು. ಪೂಜಾ ಎಸ್.ಆರ್. ವಿನ್ಯಾಸಗೊಳಿಸಿದ್ದ ಕಾಮನಬಿಲ್ಲು ಥೀಮ್‌ನ ಉಡುಪು ಧರಿಸಿದ್ದ ವಿದ್ಯಾರ್ಥಿನಿಯರು ವೇದಿಕೆಯನ್ನು ವರ್ಣಮಯವಾಗಿಸಿದರು.

ಅಶ್ವಿನಿ ಎಚ್.ಎಸ್ ಅವರು ವಿನ್ಯಾಸಗೊಳಿಸಿದ್ದ ‘ಟೈ ಆ್ಯಂಡ್ ಡೈ’ ಥೀಮ್‌ನ ಉಡುಪು, ಅಪೂರ್ವ ಕೆ.ಆರ್. ವಿನ್ಯಾಸಗೊಳಿಸಿದ್ದ 7 ಚಕ್ರಗಳು ಥೀಮ್‌, ಹರ್ಷಿತಾ ಸಿ.ಕೆ. ಅವರ ತೊಗಲುಗೊಂಬೆ ಥೀಮ್‌ನ ವಿಭಿನ್ನ ಉಡುಪುಗಳನ್ನು ತೊಟ್ಟಿದ್ದ ವಿದ್ಯಾರ್ಥಿನಿಯರು ವೇದಿಕೆ ಮೇಲೆ ಮಿಂಚಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಕ್ಕಳೊಂದಿಗೆ ಪೋಷಕರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ನಿರೂಪಕ ಸಂತೋಷ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

‘ಭವಿಷ್ಯ ರೂಪಿಸಿಕೊಳ್ಳಲು ವೇದಿಕೆಯಾಗಲಿ’

ಅಕಾಡೆಮಿ ಆಫ್ ಕ್ರಿಯೇಟಿವ್ ಎಜ್ಯುಕೇಷನ್‌ ಸಂಸ್ಥೆಯ ಕಾರ್ಯದರ್ಶಿ ಅಶೋಕ ರಾಯಬಾಗಿ  ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ವಿದ್ಯಾರ್ಥಿನಿಯರಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯಾಗಲಿ’ ಎಂದು ಆಶಿಸಿದರು. ಭುವನ ಸುಂದರಿ ಮೇಘಾ ಕೆ.ಸಿ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಮ್ರತಾ ಎಂ. ಪ್ರೊ.ಎನ್‌.ಎಲ್‌.ಮಲ್ಲಿಕಾರ್ಜುನ್ ಮಾಜಿ ಮೇಯರ್ ವೀರೇಶ್‌ ಎಸ್‌.ಎಸ್‌.ಕೆ ಸಮಾಜದ ಅಧ್ಯಕ್ಷ ಮಲ್ಲರಸಾ ಆರ್‌.ಕಾಟವೆ ಎನರ್ಜಿ ಎಂಟರ್‌ಟೈನ್‌ಮೆಂಟ್‌ ಸಿಇಒ ವಿಜಯಕುಮಾರ ಪಿ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಜಗದೀಶ್ ಕೆ.ಎಸ್‌. ಹಾಗೂ ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಿದ್ದರು.

ದಾವಣಗೆರೆಯ ಹೋಟೆಲ್‌ ಪೂಜಾ ಇಂಟರ್ ನ್ಯಾಷನಲ್‌ನ ಸಭಾಂಗಣದಲ್ಲಿ ‘ಕಲಾನಿಕೇತನ ಕಾಲೇಜ್‌ ಆಫ್ ಡಿಸೈನಿಂಗ್‌’ ವಿದ್ಯಾರ್ಥಿಗಳಿಂದ ಫ್ಯಾಶನ್ ಶೋ ನಡೆಯಿತು
ದಾವಣಗೆರೆಯ ಹೋಟೆಲ್‌ ಪೂಜಾ ಇಂಟರ್ ನ್ಯಾಷನಲ್‌ನ ಸಭಾಂಗಣದಲ್ಲಿ ‘ಕಲಾನಿಕೇತನ ಕಾಲೇಜ್‌ ಆಫ್ ಡಿಸೈನಿಂಗ್‌’ ವಿದ್ಯಾರ್ಥಿಗಳಿಂದ ಫ್ಯಾಶನ್ ಶೋ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT