ನ್ಯಾಮತಿ: ಗಣೇಶ ಚೌತಿಯಂದು ಎಲ್ಲರೂ ಗಣೇಶನ ವಿಗ್ರಹ ತಂದು ಪೂಜಿಸುವುದು ಸಂಪ್ರದಾಯ. ಆದರೆ ಪಟ್ಟಣದ ಕೆಲವು ಮನೆತನದವರು ಗಣೇಶನ ವಾಹನ ಮೂಷಿಕನನ್ನು (ಇಲಿ) ತಂದು ಭಕ್ತಿಯಿಂದ ಪೂಜಿಸಿ ಆರಾಧಿಸುತ್ತಾರೆ.
ಚೌತಿಯಂದು ಗುಂಡಭಕ್ತರ ಮನೆಯಿಂದ ಮೂಷಿಕನನ್ನು ತಂದು ದೇವರ ಮನೆಯ ಜಗುಲಿಯಲ್ಲಿ ಇಟ್ಟು ಪೂಜಿಸಿ, ಗಣೇಶನ ಪೂಜೆಗೆ ತಯಾರಿಸುವಂತೆ ಮೂಷಿಕನ ಪೂಜೆಗೆ ವಿವಿಧ ಪದಾರ್ಥಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುವುದು. ನಂತರ ಸಂಜೆ ಹರಿಯುವ ಹಳ್ಳಕೊಳ್ಳಗಳಲ್ಲಿ ಮೂಷಿಕನನ್ನು ವಿಸರ್ಜನೆ ಮಾಡುತ್ತಾರೆ.
‘ಹಿರಿಯರು ಬಟ್ಟೆ ವರ್ತಕರಾಗಿದ್ದು, ಬಟ್ಟೆ ಮಾರಾಟ ಮಾಡುವುದೇ ನಮ್ಮ ಕಸುಬು. ಇಲಿಗಳು ಬಟ್ಟೆಯನ್ನು ಕಡಿಯಬಾರದು, ಉದ್ಯಮಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪೂರ್ವಜರು ಇಲಿಯನ್ನು ಪೂಜಿಸುತ್ತಿದ್ದರು. ಈಗ ನಾವು ಬಟ್ಟೆ ವ್ಯಾಪಾರ ಮಾಡದಿದ್ದರೂ, ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಜಗಧೀಶ, ಶಶಿಕಲಾ ದಂಪತಿ, ಬಂಕಾಪುರದ ರಾಜಶೇಖರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.