ದಾವಣಗೆರೆ: ಭಾರತದಲ್ಲಿ ವರ್ಷಕ್ಕೆ ನಾಲ್ಕೂವರೆ ಕೋಟಿಯಷ್ಟು ವಿದ್ಯಾರ್ಥಿಗಳು ಪದವೀಧರರಾಗಿ ಹೊರ ಬರುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಬೌದ್ಧಿಕ ಸಾಮರ್ಥ್ಯದಿಂದ ಪದವೀಧರರು ಸ್ವಂತ ಮಾರ್ಗ ಕಂಡುಕೊಳ್ಳಬೇಕು ಎಂದು ಬೆಂಗಳೂರಿನ ಟ್ಯಾಲಿ ಸಲ್ಯೂಷನ್ ನ ಮುಖ್ಯ ಅಧಿಕಾರಿ ಎಸ್ ಜೆ ನಾಗನಗೌಡ ಹೇಳಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನಿನ ಬಿ.ಸಿ.ಎ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತರ್ಜಾಲ ವ್ಯಾಪಕತೆಯ ಮುಂದೆ ವಿಶ್ವವೇ ಕಿರಿದಾಗಿದೆ. ಇದರ ಬಳಕೆಯನ್ನು ವೈಯಕ್ತಿಕ ಹಾಗೂ ವಿಶ್ವಾತ್ಮಕ ಕಲ್ಯಾಣಕ್ಕಾಗಿ ಬಳಸಿಕೊಳ್ಳುವುದು ಯುವಶಕ್ತಿಯ ಹೊಣೆಯಾಗಿದೆ. ಪ್ರಪಂಚದ ಎಲ್ಲ ದೇಶಗಳು ತಮ್ಮ ದೇಶಗಳ ವಾಣಿಜ್ಯಾತ್ಮಕ
ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಭಾರತದತ್ತ ನೋಡುತ್ತಿವೆ. ನಾವು ಇದಕ್ಕೆ ಪ್ರತಿಕ್ರಿಯಿಸದೆ ಹೋದರೆ ಅವೆಲ್ಲ ಬೇರೆ ದೇಶಗಳತ್ತ ಮುಖ ಮಾಡಬಹುದು. ಪರಿಹಾರಗಳು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಆಗಿರಬೇಕು ಎಂದು ಹೇಳಿದರು.

ಮುಂದೆ ಜಗತ್ತಿನ ಪ್ರಮುಖ ಕರೆನ್ಸಿಗಳಾಗಿ ಡಾಲರ್ ಯುರೋಗಳು ಇರುವುದಿಲ್ಲ. ಬದಲಾಗಿ ಜ್ಞಾನ, ಸಾಮರ್ಥ್ಯ ಮತ್ತು ಅಂಕಿ ಅಂಶಗಳೇ ಭವಿಷ್ಯದ ಜಗತ್ತಿನ ಕರೆನ್ಸಿಗಳಾಗಲಿವೆ. ಕಲಿಕೆಯ ದಾಹ ಇದ್ದವರು
ಮಾತ್ರ ಇದನ್ನು ಹೊಂದಲು ಸಾಧ್ಯ. ಶಿಕ್ಷಣದಲ್ಲಿ ಸಮಸ್ಯೆಗಳಿಗೆ ಪರಿಹಾರ ಹೇಳಬಹುದಾದರೂ ಉದ್ದಿಮೆ ರಂಗದ ಸವಾಲುಗಳಿಗೆ ಪರಿಹಾರ ನಾವೇ ಹುಡುಕಿಕೊಳ್ಳಬೇಕು. ಇದಕ್ಕಾಗಿ ಪುನರ್ ಕಲಿಕೆ ನಿರಂತರ ನಡೆಯುತ್ತಿರಬೇಕು ಎಂದರು.

ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಸವಾಲುಗಳೂ ವೃದ್ಧಿ ಆಗುತ್ತಿವೆ. ಇವುಗಳನ್ನು ಎದುರಿಸಲು ಶಿಸ್ತು, ಶ್ರದ್ಧೆ ಮತ್ತು ಶ್ರಮ ಅತ್ಯವಶ್ಯ. ಪದವಿಗೆ ತಕ್ಕ ಉದ್ಯೋಗಗಳಿಸಿಕೊಳ್ಳಬೇಕೆಂದರೆ ಜ್ಞಾನದೊಂದಿಗೆ ಕೌಶಲವೂ ಬೇಕು’ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ ವೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಅವರು ಉಪಸ್ಥಿತರಿದ್ದರು. ಪದವೀಧರರಿಗೆ ನವೀನ್ ಎಚ್. ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೀತಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಅಂಜನಾದ್ರಿ ಎಲ್.ಟಿ. ಸ್ವಾಗತಿಸಿದರು. ಸ್ವಾತಿ ಡಿ.ಎಂ., ಪ್ರಶಾಂತಿನಿ ಬಿ.ಎಂ. ಅತಿಥಿಗಳ ಪರಿಚಯ ಮಾಡಿದರು. ಶಿವರಂಜಿನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.