ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರಾಟದ ಸಮಸ್ಯೆಯವರಿಗೆ ಎಚ್ಚರಿಕೆಯ ಕಾಲ

ಚಳಿಗಾಲ: ತಂಪು ವಾತಾವರಣದಲ್ಲಿ ಕ್ರಿಯಾಶೀಲವಾಗುವ ವೈರಾಣುಗಳು
Last Updated 12 ನವೆಂಬರ್ 2020, 5:09 IST
ಅಕ್ಷರ ಗಾತ್ರ

ದಾವಣಗೆರೆ: ‘ನನಗೆ ಸುಮಾರು 30 ವರ್ಷಗಳಿಂದ ಅಲರ್ಜಿ ಸಮಸ್ಯೆ ಇದೆ. ಕಳೆದ ಒಂದು ವಾರದಿಂದ ಚಳಿ ಜಾಸ್ತಿಯಾಗಿ ಇಬ್ಬನಿ ಬೀಳುತ್ತಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಶೀತ ಜಾಸ್ತಿಯಾಗಿದೆ’.

‘ನನ್ನ ಮಗನಿಗೆ ಈಗ 11 ವರ್ಷ. ಅವನಿಗೆ ಚಿಕ್ಕದಿನಿಂದಲೂ ಕೆಮ್ಮು ಇದೆ. ಪ್ರತಿ ವರ್ಷ ಚಳಿ ಆರಂಭಗೊಂಡಾಗ ಕೆಮ್ಮು ಜಾಸ್ತಿಯಾಗುತ್ತಿತ್ತು. ಈ ಬಾರಿ ಚಳಿ ಮತ್ತು ಇಬ್ಬನಿ ಜಾಸ್ತಿ ಇರುವುದರಿಂದ ಕೆಮ್ಮು ವಿಪರೀತವಾಗಿದೆ. ಕೆಮ್ಮಿ ಕೆಮ್ಮಿ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಎಷ್ಟು ತೊಂದರೆಯಾಗುತ್ತಿದೆ ಎಂದರೆ ಅತ್ತಿತ್ತ ನಡೆದುಕೊಂಡು ಹೋಗಲೂ ಆಗದಷ್ಟು ಸುಸ್ತಾಗಿ ಬಿಡುತ್ತಾನೆ. ಕಫ ಬ್ಲಾಕ್‌ ಆಗುವುದರಿಂದ ಊಟ ಮಾಡಲೂ ಕಷ್ಟವಾಗುತ್ತದೆ. ಕಫ ತೆಗೆದ ಮೇಲೆ ಊಟ ಮಾಡಿಸುತ್ತಿದ್ದೇವೆ’.

ಮೊದಲನೇಯದ್ದು ದೇವರಾಜ ಅರಸು ಬಡಾವಣೆಯ ಪ್ರೇಮಾ ಅವರ ಅನುಭವವಾದರೆ, ಎರಡನೇಯದ್ದು ವಿನೋಬನಗರದ ಶೈಲಾ ಅವರ ಮಗ ಕಾರ್ತಿಕನ ಸಮಸ್ಯೆ.

ಒಂದು ವಾರದ ಈಚೆಗೆ ಆರಂಭಗೊಂಡಿರುವ ಎರಡು ದಿನಗಳಿಂದ ಅಧಿಕಗೊಂಡಿರುವ ಚಳಿಯಿಂದ ಹೀಗೆ ಬಳಲುತ್ತಿರುವವರ ಸಂಖ್ಯೆ ಎಲ್ಲ ಕಡೆ ಹೆಚ್ಚಾಗಿದೆ. ಆಸ್ತಮಾ ಸಹಿತ ಉಸಿರಾಟದ ಸಮಸ್ಯೆ ಇರುವವರಿಗೆ ಇನ್ನೂ ಕಷ್ಟವಾಗಿದೆ.

ಚಳಿಗಾಲದಲ್ಲಿ ವಾತಾವರಣ ತಂಪಾಗುತ್ತದೆ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾಗಿ ಇರುವವರಿಗೆ ಆಸ್ತಮಾ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಚಳಿಗಾಲದಲ್ಲಿಯೇ ಎಲೆಗಳು ಉದುರುವ, ಹೂವು ಬಿಡುವ ಮತ್ತು ಉದುರುವ ಪ್ರಕ್ರಿಯೆಗಳು ನಡೆಯುತ್ತವೆ. ಇದರಿಂದ ಅಲರ್ಜಿ ಇರುವವರಿಗೆ ಮತ್ತಷ್ಟು ತೊಂದರೆಯಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೆ ಮತ್ತೆ ತೊಂದರೆಯಾಗದಂತೆ ನಿಯಂತ್ರಿಸಲು ಔಷಧಗಳಿವೆ. ಅವುಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು. ಆದಷ್ಟು ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಅದಕ್ಕಾಗಿ ಬೆಚ್ಚನೆ ಬಟ್ಟೆ ಧರಿಸುವುದು,
ಮುಖಕ್ಕೆ ಮಾಸ್ಕ್‌ ಹಾಕಿಕೊಳ್ಳುವುದು ಮಾಡಬೇಕು. ಬಿಸಿ ನೀರು ಕುಡಿಯಬೇಕು. ತಂಪು ಪಾನೀಯಗಳಿಂದ ದೂರ ಇರಬೇಕು ಎಂಬುದು ಅವರ ಸಲಹೆ.

ಚಳಿ ಇದ್ದರೆ ಕೊರೊನಾ ಜಾಸ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. ಅದು ಯಾವ ಪ್ರಮಾಣದಲ್ಲಿ ಇರುತ್ತದೆ ಎಂಬುದು ಗೊತ್ತಿಲ್ಲ. ಸಾಧಾರಣವಾಗಿ ವಾತಾವರಣ ಬಿಸಿಯಾಗಿದ್ದರೆ ಯಾವುದೇ ವೈರಾಣುಗಳು ಬದುಕಿ ಉಳಿಯುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಚಳಿಗಾಲ ಅಥವಾ ತಂಪು ಇರುವ ವಾತಾವರಣದಲ್ಲಿ ವೈರಾಣುಗಳು ಕ್ರಿಯಾಶಿಲವಾಗುತ್ತವೆ. ವೈರಲ್‌ ಫಿವರ್‌ಗಳು ಇದೇ ಸಮಯದಲ್ಲಿ ಹೆಚ್ಚಾಗಲು ಇದು ಕಾರಣ. ಅದೇ ತರ್ಕದಲ್ಲಿ ಕೊರೊನಾ ಕೂಡ ಜಾಸ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕಾಗಿ ಎಲ್ಲರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯರು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT