ಶುಕ್ರವಾರ, ಮೇ 14, 2021
32 °C

ಲಕ್ಕಿ ಡ್ರಾ ನೆಪದಲ್ಲಿ ₹ 26.83 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲಕ್ಕಿ ಡ್ರಾ ನೆಪದಲ್ಲಿ ನಗರದ ಕೆ.ಬಿ. ಬಡಾವಣೆಯ ವ್ಯಕ್ತಿಯೊಬ್ಬರಿಗೆ ₹ 26.83 ಲಕ್ಷ ವಂಚಿಸಲಾಗಿದೆ.

ನ್ಯಾಪ್ಟಾಲ್ ಆನ್‌ಲೈನ್ ಶಾಪಿಂಗ್ ಕಂಪನಿಯಿಂದ ಆ ವ್ಯಕ್ತಿಗೆ ಒಂದು ಪತ್ರ ಹಾಗೂ ಅದರ ಜೊತೆಗೆ ಸ್ಕ್ರಾಚ್ ಅಂಡ್ ವಿನ್ ಕೂಪನ್ ಬಂದಿದ್ದು, ಕೂಪನ್ ತೆರೆದು ನೋಡಿದಾಗ ಲಕ್ಕಿ ಡ್ರಾದಲ್ಲಿ ₹14.80 ಮೌಲ್ಯದ ಮಹೇಂದ್ರ ಎಕ್ಸ್‌ಯುವಿ ಕಾರು ಬಹುಮಾನವಾಗಿ ಬಂದಿದೆ ಎಂಬುದಾಗಿ ಬರೆಯಲಾಗಿತ್ತು.

ಅಲ್ಲಿದ್ದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನ್ಯಾಪ್ಟಾಲ್ ಆನ್‌ಲೈನ್ ಕಸ್ಟಮರ್ ಕೇರ್ ಅಧಿಕಾರಿ ಎಂದು ಪರಿಚಯಿಸಿಕೊಂಡು ‘ಲಕ್ಕಿ ಡ್ರಾಗೆ ನಿಮ್ಮ ನಂಬರ್ ಆಯ್ಕೆಯಾಗಿದೆ. ಕಾರಿನ ಜೊತೆಗೆ ₹ 1 .22 ಲಕ್ಷ ಬಹುಮಾನವಾಗಿ ಬಂದಿದೆ’ ಎಂದು ತಿಳಿಸಿದ. ಇದನ್ನು ನಂಬಿದ ಅವರು ಹಂತ ಹಂತವಾಗಿ ₹ 26.83 ಲಕ್ಷವನ್ನು ವರ್ಗಾವಣೆ ಮಾಡಿದ್ದಾರೆ. ಪುನಃ ಅದೇ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು