ಮಲೇಬೆನ್ನೂರು: ಪಟ್ಟಣದ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಸೆ. 21ರಂದು ನಡೆಯಲಿದ್ದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಪೊಲೀಸ್ ಇಲಾಖೆ ವಾಹನಗಳ ಮಾರ್ಗ ಬದಲಾವಣೆ ಮಾಡಿದೆ.
ಹೊನ್ನಾಳಿಯಿಂದ ಹರಿಹರದ ಕಡೆ ಹೋಗುವ ಎಲ್ಲ ವಾಹನಗಳು ಕೊಮಾರನಹಳ್ಳಿ ಭದ್ರಾ ಮುಖ್ಯನಾಲೆ ಸೇವಾ ರಸ್ತೆ ಮೂಲಕ ಗುಡ್ಡ ಬೇವಿನಹಳ್ಳಿ– ಜಿಗಳಿ– ಕುಂಬಳೂರು ಮೂಲಕ ಸಂಚರಿಸಲಿವೆ.
ಅದೇ ರೀತಿ ಹರಿಹರದಿಂದ ಹೊನ್ನಾಳಿ ಕಡೆ ಸಂಚರಿಸುವ ವಾಹನಗಳು ಕುಂಬಳೂರು, ನಿಟ್ಟೂರು, ಹರಳಹಳ್ಳಿ, ಹಾಲಿವಾಣ, ಕೊಮಾರನಹಳ್ಳಿ ಕೆರೆ ಏರಿ ಕಡೆಯಿಂದ ಸಂಚರಿಸಲಿವೆ.
ಪಟ್ಟಣದಲ್ಲಿ ಸೆ 21ರಂದು ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಿದೆ.
ಪೊಲೀಸ್ ಭದ್ರತೆ: ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ, 20 ಜನ ಪಿಎಸ್‌ಐ, 30 ಎಎಸ್‌ಐ, 240 ಜನ ಪೊಲೀಸರು, ಡಿಎಆರ್ 2 ತುಕಡಿ, ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ, ಡ್ರೋನ್ ಬಳಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪಟ್ಟಣವನ್ನು ತಳಿರು ತೋರಣ, ಬಾಳೆಕಂಬ, ಬ್ಯಾನರ್, ಬಂಟಿಂಗ್ ಕಟ್ಟಿ ಶೃಂಗರಿಸಲಾಗಿದೆ.