ದಾವಣಗೆರೆ: ವ್ಯಾಪಾರಿಯೊಬ್ಬರಿಗೆ ನಕಲಿ ಬಂಗಾರ ನೀಡಿ ವಂಚಿಸಿದ್ದ ಮಹಾರಾಷ್ಟ್ರದ ಮೂವರನ್ನು ಇಲ್ಲಿನ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹ 4 ಲಕ್ಷ ಹಾಗೂ ಒಂದು ಕೆ.ಜಿ. ನಕಲಿ ಬಂಗಾರದ ಬಿಲ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊನ್ನಾಳಿ ಪಟ್ಟಣದ ಬಟ್ಟೆ ವ್ಯಾಪಾರಿ ನರಪತ್ ಸಿಂಗ್ ವಂಚನೆಗೆ ಒಳಗಾದವರು.

‘ಪೈಪ್‌ಲೈನ್ ಕೆಲಸ ಮಾಡುವಾಗ ಗಡಿಗೆಯಲ್ಲಿ ಬಂಗಾರದ ಬಿಲ್ಲೆಗಳು
ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಿದ ಆರೋಪಿ
ಗಳು ನರಪತ್ ಸಿಂಗ್ ಅವರನ್ನು ದಾವಣಗೆರೆಗೆ ಕರೆಯಿಸಿಕೊಂಡು ಒಂದು ಕೆ.ಜಿ. ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ₹ 5 ಲಕ್ಷ ಪಡೆದಿದ್ದಾರೆ.

ಈ ಬಗ್ಗೆ ಅವರು ಕೆಟಿಜೆ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಡಿವೈಎಸ್‌ಪಿ ನಾಗೇಶ ಐತಾಳ್, ಸಿಪಿಐ ಗುರು ಬಸವರಾಜ ಮಾರ್ಗದರ್ಶನದಲ್ಲಿ ಎಸ್‌ಐಗಳಾದ ಅಬ್ದುಲ್ ಖಾದರ್ ಜಿಲಾನಿ, ಪ್ರಭು ಡಿ.ಕೆಳಗಿನ ಮನೆ, ಸಿಬ್ಬಂದಿಪ್ರಕಾಶ ಟಿ, ಗಿರೀಶ ಗೌಡ, ಎಮ್ ಮಂಜಪ್ಪ, ಷಣ್ಮುಖ ಕೆ, ದಾದಾಖಲಂದರ್, ರಾಘವೇಂದ್ರ, ಶಾಂತರಾಜ, ಉಮೇಶ ಬಿಸ್ನಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.