ಶುಕ್ರವಾರ, ಅಕ್ಟೋಬರ್ 22, 2021
29 °C

ದಾವಣಗೆರೆ: ಚನ್ನಗಿರಿ ತಾಲ್ಲೂಕಿನಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ, ಬುಧವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 6 ಮನೆಗಳಿಗೆ ಹಾನಿಯಾಗಿದೆ.

ಬುಧವಾರ ಬೆಳಿಗ್ಗೆಯಿಂದಲೇ ಆರಂಭವಾದ ಜಡಿಮಳೆ ಮಧ್ಯಾಹ್ನದವರೆಗೂ ಸುರಿದಿದೆ. ಐದಾರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

ಚನ್ನಗಿರಿ 14.5 ಮಿ.ಮೀ., ದೇವರಹಳ್ಳಿ 16.4 ಮಿ.ಮೀ, ಕತ್ತಲಗೆರೆ 8.2 ಮಿ.ಮೀ., ತ್ಯಾವಣಿಗೆ 38 ಮಿ.ಮೀ., ಬಸವಾಪಟ್ಟಣ 8.6 ಮಿ.ಮೀ., ಜೋಳದಹಾಳ್ 24.2 ಮಿ.ಮೀ., ಸಂತೇಬೆನ್ನೂರು 4.1 ಮಿ.ಮೀ., ಉಬ್ರಾಣಿ 22.4 ಮಿ.ಮೀ, ಕೆರೆಬಿಳಚಿಯಲ್ಲಿ 30.4 ಮಿ.ಮೀ. ಮಳೆಯಾಗಿದೆ. ಮಳೆಗೆ ತಾಲ್ಲೂಕಿನ ಬಸವಾಪಟ್ಟಣ ಹೋಬಳಿಯ ನಲ್ಕುದುರೆಯಲ್ಲಿ 1, ಸಂತೇಬೆನ್ನೂರಿನಲ್ಲಿ 3, ಟಿ. ಗೊಲ್ಲರಹಟ್ಟಿಯಲ್ಲಿ 1 ಹಾಗೂ ಮೆದಿಕೆರೆ ಗ್ರಾಮದಲ್ಲಿ 1 ಮನೆ ಸೇರಿ ಒಟ್ಟು 6 ಮನೆಗಳಿಗೆ ಹಾನಿಯಾಗಿದ್ದು, ₹ 6.40 ಲಕ್ಷ ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಡಾ. ಪಟ್ಟರಾಜಗೌಡ ತಿಳಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆ ತುಂಬಿದ್ದು, ಅ.13ರಂದು ಬಾಗಿನ ಅದ್ದೂರಿಯಾಗಿ ಬಾಗಿನ ಅರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಕೆರೆಗೆ ಸೂಳೆಕೆರೆಯ ನೀರನ್ನು ಬಿಡಲಾಗಿತ್ತು. ಜತೆಗೆ ಮಳೆಯು ಬಂದು ಕೆರೆ ತುಂಬಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.