ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಲಸಿಕೆಗೆ ತಮ್ಮ ಫೋಟೊ ಹಾಕಿಸಿಕೊಳ್ಳುವುದು ಬೇಡ

ಬಿಜೆಪಿಯವರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ
Last Updated 16 ಜೂನ್ 2021, 12:46 IST
ಅಕ್ಷರ ಗಾತ್ರ

ದಾವಣಗೆರೆ: ಜನರಿಗೆ ಸರ್ಕಾರದ ಲಸಿಕೆ ಹಾಕಿಸಿ ತಮ್ಮ ಫೋಟೊ ಹಾಕಿಸಿಕೊಳ್ಳುವುದು ಬೇಡ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದರು.

91ನೇ ಜನ್ಮದಿನದ ಪ್ರಯುಕ್ತ ನಗರದ ಐಎಂಎ ಹಾಲ್‌ನಲ್ಲಿ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ ಹಾಗೂ ಕೊರೊನಾ ಉಚಿತ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷದಿಂದ ಜನರಿಗೆ ಉಚಿತ ಲಸಿಕೆ ಹಾಕಿಸಲು ಸಲಹೆ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ‘ಅವರಿಗೆ (ಬಿಜೆಪಿಯವರಿಗೆ) ನಾವ್ಯಾಕೆ ಸಲಹೆ ಕೊಡಬೇಕು. ಬಡವರಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸಿದ್ದರೆ ಲಸಿಕೆ ಹಾಕಿಸಲಿ.ಸರ್ಕಾರದ ಹೆಸರಿನಲ್ಲಿ ತಮ್ಮ ಫೋಟು ಹಾಕಿಕೊಳ್ಳುವುದು ಬೇಡ’ ಎಂದು ಹೇಳಿದರು.

‘ಚುನಾವಣೆಗೋಸ್ಕರ ಲಸಿಕೆ ಹಾಕಿಸುವ ಕೆಲಸ ಮಾಡಿಲ್ಲ. ಕೊರೊನಾದಿಂದ ಜನರು ಸಾಯುವುದು ಕಡಿಮೆಯಾಗಲಿ ಎನ್ನುವ ಉದ್ದೇಶದಿಂದ ಕೊಡುತ್ತಿದ್ದೇವೆ’ ಎಂದು ಹೇಳಿದರು.

‘ಮಿತವಾದ ಊಟ, ಎಲ್ಲಾ ಮಿತವಾಗಿ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ’ ಎಂದು ತಮ್ಮ ಆರೋಗ್ಯದ ಗುಟ್ಟನ್ನು ಹೇಳಿದರು.

ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೇ ಕೇಳಿದ ಪ್ರಶ್ನೆ ‘ಸರ್ಕಾರ ರಾಜ್ಯ ರಾಜಕಾರಣದ ಬಗ್ಗೆ ಎಲ್ಲಾದರೂ ಕೆಡಗುವರು ಇರುತ್ತಾರೆ ಏನು ಮಾಡಲು ಆಗುತ್ತೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT