ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹೆಬ್ಬಾಳು ಪಂಚಾಯಿತಿಯಲ್ಲಿ 2 ವಾರ್ಡ್‌ಗಳ ಮತದಾನ ಮುಂದೂಡಿಕೆ

Last Updated 22 ಡಿಸೆಂಬರ್ 2020, 8:11 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಮತಗಟ್ಟೆ ಸಂಖ್ಯೆ ಅದಲು ಬದಲಾಗಿ ಗೊಂದಲ ಉಂಟಾಗಿತ್ತು. ಹಾಗಾಗಿ ಮತದಾನವನ್ನು ಮುಂದೂಡಲಾಗಿದೆ.

ಹೆಬ್ಬಾಳು-1 ಮತ್ತು 2 ವಾರ್ಡ್‌ಗಳ ಆರು ಕ್ಷೇತ್ರಗಳಿಗೆ ಹನ್ನರೆಡು ಮಂದಿ ಸ್ಪರ್ಧಿಸಿದ್ದರು. ಈ 12 ಮಂದಿ ಪ್ರಚಾರ ಮಾಡಿದ್ದು, ಒಂದು ಕಡೆ ಮತಪಟ್ಟಿ ಇನ್ನೊಂದು ಕಡೆಯದ್ದಿರೋದು ಸೋಮವಾರ ರಾತ್ರಿ ಗೊತ್ತಾಗಿದೆ. ಅವರು ಸರಿಪಡಿಸಲು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.

ವಿಧಾನಸಭಾ ಚುನಾವಣೆಯ ಪಟ್ಟಿ ಇಟ್ಟುಕೊಂಡು ಪ್ರಚಾರ ಮಾಡಿದ್ದರಿಂದ ಗೊಂದಲವಾಗಿದೆ. ಎಲ್ಲವನ್ನು ಪರಿಗಣಿಸಿ, ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ. ಅವರು ಯಾವಾಗ ಚುನಾವಣೆ ನಡೆಸಬೇಕು ಎಂದು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದರು‌.

ಹೆಬ್ಬಾಳು ವಾರ್ಡ್ 1ರಲ್ಲಿ ( ಮತಗಟ್ಟೆ 108) 807 ಮತದಾರರಿದ್ದಾರೆ. ವಾರ್ಡ್ 2ರಲ್ಲಿ (ಮತಗಟ್ಟೆ 109) 917 ಮತದಾರರಿದ್ದಾರೆ.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸಿಲ್ದಾರ್ ಗಿರೀಶ್, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ ದಾಖಲೆ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿದರು.ಹೆಬ್ಬಾಳು ಪಂಚಾಯಿತಿಯ ಉಳಿದ ಐದು ವಾರ್ಡ್ಗಳಿಗೆ ಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT