ಕಡರನಾಯ್ಕನಹಳ್ಳಿ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ರೈತರಿಗೆ ಲಾಭದಾಯಕ. ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೊ ಯೂರಿಯಾ ಬಳಸುವುದರಿಂದ ಹೆಚ್ಚಿನ ಇಳುವರಿ ಸಾಧ್ಯ ಎಂದು ಕೃಷಿ ಅಧಿಕಾರಿ ಎನ್. ವಿಕಾಸ್ ತಿಳಿಸಿದರು.

ಸಮೀಪದ ಗುಡ್ಡದ ತಿಮ್ಮಿನಕಟ್ಟಿ ಗ್ರಾಮದ ರೈತರ ಆಂಜಿನಪ್ಪ ಅವರ ಜಮೀನಿನಲ್ಲಿ ಆತ್ಮ ಯೋಜನೆಯಡಿ ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆಯ ವೇಳೆ ಮಾತನಾಡಿದರು.

ನ್ಯಾನೊ ಯೂರಿಯಾವನ್ನು ಮೇಲು ಗೊಬ್ಬರವಾಗಿ ನೀಡುವುದು ಪರಿಣಾಮಕಾರಿ. ಉತ್ಪಾದನೆಯ ವೆಚ್ಚ ಕಡಿಮೆಯಾಗಿದ್ದು, ಆದಾಯವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಡ್ರೋನ್ ಮೂಲಕ ಗೊಬ್ಬರ ಸಿಂಪಡಣೆಯನ್ನು ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದರು. ಕೃಷಿ ಇಲಾಖೆಯ ಸಿಬ್ಬಂದಿ ಎಂ.ವಿ. ರಾಕೇಶ್, ಜಿ.ಆರ್. ಆನಂದರಾಜ್, ಗಣೇಶ್, ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.