ಗುರುವಾರ , ಸೆಪ್ಟೆಂಬರ್ 23, 2021
24 °C

ಹರಿಹರ: ಕಾಳಿದಾಸ ನಗರ 14ನೇ ವಾರ್ಡ್‌ ಉಪಚುನಾವಣೆ: ಜೆಡಿಎಸ್‍ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಇಲ್ಲಿನ ಕಾಳಿದಾಸ ನಗರ 14ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಅಲ್ತಾಫ್‍ 742 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಜೀನತ್‍ ಉನ್ನೀಸಾ ಅವರ ವಿರುದ್ಧ 333 ಮತಗಳ ಅಂತರದಿಂದ ಜಯ ಸಾಧಿಸಿದರು.

ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ 8ರಿಂದ ಮತಏಣಿಕೆ ಕಾರ್ಯ ಆರಂಭಗೊಂಡಿತು. 8.30ಕ್ಕೆ ಫಲಿತಾಂಶ ಪ್ರಕಟಗೊಂಡಿತು. ಮತಏಣಿಕೆ ಕಾರ್ಯದಲ್ಲಿ ಚುನಾವಣಾಧಿಕಾರಿ ರಾಮಾಂಜನೇಯ, ಉಪ ಚುನಾವಣಾಧಿಕಾರಿ ಲಕ್ಷ್ಮಣನಾಯಕ್‌, ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ, ಪಿಎಸ್‍ಐ ಸುನಿಲ್‍ ತೇಲಿ, ಸಿಬ್ಬಂದಿ ಬಿ.ಬಿ. ರೇವಣನಾಯಕ್‌, ಬಸವರಾಜಯ್ಯ ಭಾಗವಹಿಸಿದ್ದರು.

ಉಪಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ 1,444 ಮತದಾರರು ಹಕ್ಕು ಚಲಾಯಿಸಿದ್ದರು. ಜೆಡಿಎಸ್‍ ಅಭ್ಯರ್ಥಿ ಬಿ. ಅಲ್ತಾಫ್‍ 742, ಕಾಂಗ್ರೆಸ್‍ ಅಭ್ಯರ್ಥಿ ಜೀನತ್‍ ಉನ್ನೀಸಾ 409, ಬಿಜೆಪಿ ಅಭ್ಯರ್ಥಿ ಸಂತೋಷ ರಾಜನಹಳ್ಳಿ 290 ಹಾಗೂ ಪಕ್ಷೇತರ ಅಭ್ಯರ್ಥಿ ಸಂಕೇತರಾಜ್‍ 3 ಮತಗಳನ್ನು ಪಡೆದರು.

ಪಟಾಕಿ ಸಿಡಿಸಿ ಸಂಭ್ರಮ: ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಜಯಘೋಷಗಳೊಂದಿಗೆ ಸಂಭ್ರಮಾಚರಣೆ ಮಾಡಿದರು. ಮಾಜಿ ಶಾಸಕ ಎಚ್‍.ಎಸ್‍. ಶಿವಶಂಕರ್‍ ಹಾಗೂ ವಿಜೇತ ಅಭ್ಯರ್ಥಿ ಬಿ. ಅಲ್ತಾಫ್‍ಗೆ ಹಾರ ಹಾಕಿ ಮೆರವಣಿಗೆ ನಡೆಸಲಾಯಿತು.

ಕೋವಿಡ್‍ ನಿಯಮ ಮಾಯ: ಜೆಡಿಎಸ್‍ ಸಂಭ್ರಮಾಚರಣೆಯಲ್ಲಿ ಅಂತರ ಹಾಗೂ ಮಾಸ್ಕ್‌ ಕಣ್ಮರೆಯಾಗಿತ್ತು. ನೂರಾರು ಜನ ಗುಂಪು ಸೇರಿ ಮೆರವಣಿಗೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು