ಸೇತುವೆಗಳ ಸಮೀಪ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ರಾಣೆಬೆನ್ನೂರು ತಹಶೀಲ್ದಾರ್ ಹಾಗೂ ಟಾಸ್ಕ್‌ಫೋರ್ಸ್ ತಂಡದವರೊಂದಿಗೂ ಚರ್ಚಿಸುತ್ತೇನೆ
ಸಂತೋಷ್ ಕುಮಾರ್ ಜಿ. ತಹಶೀಲ್ದಾರ್ ಹರಿಹರ
‘ಅಕ್ರಮ ಮರಳು ಗಣಿಗಾರಿಕೆ ನಿಲ್ಲಲಿ’
‘ಅಪಾಯ ಸಂಭವಿಸುವ ಮುನ್ನವೇ ರಾಷ್ಟ್ರೀಯ ಸ್ವತ್ತುಗಳೆನಿಸಿದ ಸೇತುವೆಗಳ ಭದ್ರತೆ ಹಾಗೂ ಪರಿಸರದ ದೃಷ್ಟಿಯಿಂದ ಈ ಭಾಗದ ಅಕ್ರಮ ಮರಳು ಗಣಿಗಾರಿಕೆಯನ್ನು ಎರಡೂ ಜಿಲ್ಲೆಗಳ ಜಿಲ್ಲಾಡಳಿತಗಳು ತಕ್ಷಣ ತಡೆಯಬೇಕಿದೆ’ ಎನ್ನುತ್ತಾರೆ ನಿವೃತ್ತ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್ ವಿ.ಎಸ್.ಮಲ್ಲಿಕಾರ್ಜುನ್.