ಗುರುವಾರ , ನವೆಂಬರ್ 21, 2019
22 °C

ದಾವಣಗೆರೆ: ಭಾರೀ ಮಳೆಗೆ ಕೊಚ್ಚಿಹೋದ ಬೆಳೆ

Published:
Updated:

ದಾವಣಗೆರೆ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದೇವರಬೆಳಕೆರೆ ಮತ್ತು ಮುಕ್ತನಹಳ್ಳಿ ಹಳ್ಳ ನೀರು ಹರಿದಿದ್ದು, 350 ಎಕರೆಯಷ್ಟು ಭತ್ತದ ಗದ್ದೆಗಳು ನೀರಿನಿಂದ ಕೊಚ್ಚಿ ಹೋಗಿವೆ.

ತಾಲ್ಲೂಕಿನ ಸಂಕ್ಲಿಪುರ, ಗುಳದಹಳ್ಳಿ, ಮಲ್ಲನಾಯಕನಹಳ್ಳಿ, ಕುಣಿಬೆಳೆಕೆರೆ, ಬೂದಿಹಾಳ್‌, ನಂದಿತಾವರೆಗಳಲ್ಲಿ ರೈತರ ಗದ್ದೆಗಳು ನೀರಿನಿಂದ ಆವೃತ್ತವಾಗಿದ್ದು, ಭತ್ತವು ಕಾಳು ಕಟ್ಟುವ ಹಂತದ್ದಲ್ಲಿದ್ದು,  ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಪರಿತಪಿಸುತ್ತಿದ್ದಾರೆ. 150ಕ್ಕೂ ಹೆಚ್ಚು ರೈತರ ಭತ್ತದ ಗದ್ದೆಗಳು ನೀರಿನಿಂದ ಕೊಚ್ಚಿ ಹೋಗಿವೆ. ಅಲ್ಲದೇ ಗುಳದಹಳ್ಳಿ, ಸಕ್ಲಿಪುರಗಳಲ್ಲಿ ಮಳೆಯಿಂದಾಗಿ 10 ಮನೆಗಳಿಗೆ ಹಾನಿಯಾಗಿದೆ.

ಪ್ರತಿಕ್ರಿಯಿಸಿ (+)