ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಬಿರುಗಾಳಿ, ಮಳೆ ಪರಿಣಾಮ: ವಿದ್ಯುತ್, ನೀರಿಲ್ಲದೇ ಪರಿತಪಿಸಿದ ಜನತೆ

Published 12 ಮೇ 2023, 10:26 IST
Last Updated 12 ಮೇ 2023, 10:26 IST
ಅಕ್ಷರ ಗಾತ್ರ

ಹರಿಹರ: ಬುಧವಾರ ಸಂಜೆ ಬಿರುಗಾಳಿಯೊಂದಿಗೆ ರಭಸವಾಗಿ ಸುರಿದ ಮಳೆಯ ಪರಿಣಾಮವಾಗಿ ಹರಿಹರ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿ ಜನತೆ ಪರಿತಪಿಸಿದರು.

ಮಳೆಯು ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನೂರಾರು ಮರಗಳನ್ನು ಧರಾಶಾಹಿಯಾಗಿಸಿದೆ. ಮರಗಳು ವಿದ್ಯುತ್ ಸರಬರಾಜು ಲೈನ್ ಮೇಲೆ ಕುಸಿಯುವುದರಿಂದ ಹಲವೆಡೆ ಕಂಬ, ಟಿಸಿಗಳಿಗೂ ಹಾನಿ ಉಂಟಾಗಿದೆ. ಪರಿಣಾಮವಾಗಿ ಬುಧವಾರ ಸಂಜೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬಿದ್ದ ಮರ, ಗಿಡಗಳನ್ನು ತೆರವುಗೊಳಿಸಿ ವಿದ್ಯುತ್ ಕಂಬ, ವಿದ್ಯುತ್ ಲೈನ್‌ಗಳನ್ನು ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ಬುಧವಾರ ಸಂಜೆ ಹಾಗೂ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ನೀರು ಶುದ್ಧೀಕರಣ ಘಟಕ ಹಾಗೂ ಹಲವೆಡೆ ವಿದ್ಯುತ್ ಸರಬರಾಜು 24 ಗಂಟೆಗಳ ಕಾಲ ಸ್ಥಗಿತಗೊಂಡ ಪರಿಣಾಮವಾಗಿ ಗುರುವಾರ ಜಲಸಿರಿ ನೀರು ಸರಬರಾಜು ಗುರುವಾರ ಇಡೀ ದಿನ ಸ್ಥಗಿತಗೊಂಡಿತು. ಜನತೆ ನೀರಿಗಾಗಿ ಪರದಾಡಿದರು. ಹಳೆಯ ಕೊಳವೆಬಾವಿ ನೀರಿನ ಮೇಲೆ ನಿರ್ಭರರಾದರು.

ಬುಧವಾರ ರಾತ್ರಿ ಹಾಗೂ ಗುರುವಾರ ಇಡೀ ದಿನ ವಿದ್ಯುತ್ ಇಲ್ಲದೆ ಜನರು ಸೊಳ್ಳೆ ಕಾಟ, ಸೆಕೆಯಿಂದ ಬಸವಳಿದರು. ಗುರುವಾರ ರಾತ್ರಿ ವೇಳೆಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಆರಂಭವಾಯಿತು. ಆದರೂ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿತ್ತು.

ಹರಿಹರದ ದಾಲ್ಮಿಯಾ ವಿಶ್ರಾಮ್ ಘಾಟ್ ಬಳಿಯ ಟ್ರಾನ್ಸ್‌ಫಾರ್ಮರ್ ಕಂಬಗಳು ವಾಲಿರುವುದು.
ಹರಿಹರದ ದಾಲ್ಮಿಯಾ ವಿಶ್ರಾಮ್ ಘಾಟ್ ಬಳಿಯ ಟ್ರಾನ್ಸ್‌ಫಾರ್ಮರ್ ಕಂಬಗಳು ವಾಲಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT