ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚುವರಿ ಸಾಲ ಮಂಜೂರಾತಿಗೆ ಆಡಳಿತ ಮಂಡಳಿ ಮನವಿ 

ಹೊನ್ನಾಳಿ ತಾಲ್ಲೂಕು ಯರೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ
Published : 29 ಆಗಸ್ಟ್ 2024, 15:57 IST
Last Updated : 29 ಆಗಸ್ಟ್ 2024, 15:57 IST
ಫಾಲೋ ಮಾಡಿ
Comments

ಹೊನ್ನಾಳಿ: ತಾಲ್ಲೂಕಿನ ಯರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈಗಾಗಲೇ ₹4 ಕೋಟಿ ಹಣ ಮಂಜೂರಾಗಿದೆ. ₹12 ಕೋಟಿವರೆಗೂ ಮಂಜೂರು ಮಾಡಲು ಅವಕಾಶವಿದೆ. ಹೆಚ್ಚುವರಿ ಸಾಲವನ್ನು 2–3 ತಿಂಗಳೊಳಗಾಗಿ ಮಂಜೂರು ಮಾಡಿಸಲು ಯತ್ನಿಸುತ್ತೇನೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ಸುರೇಂದ್ರಗೌಡ ಹೇಳಿದರು.

ಗುರುವಾರ ತಾಲ್ಲೂಕಿನ ಯರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಭಿವೃದ್ಧಿಪಡಿಸಿದ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್‌ನ ಮತ್ತೊಬ್ಬ ನಿರ್ದೇಶಕ ಕಂಚುಗಾರನಹಳ್ಳಿ ಬಸಣ್ಣ ಮಾತನಾಡಿ, ಈ ಸಂಘ ತಮ್ಮ ವ್ಯಾಪ್ತಿಗೆ ಬರವುದಿಲ್ಲವಾದರೂ ಶಾಸಕರ ಪುತ್ರ ಡಿ.ಜಿ. ಸುರೇಂದ್ರ ಅವರ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಸಂಘದ ನಿರ್ದೇಶಕರು ಸಂಘದ ಅಭಿವೃದ್ಧಿ ಹಾಗೂ ರೈತರಿಗೆ ವಿತರಿಸಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. 

ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ವಿರೂಪಾಕ್ಷಪ್ಪ, ಉಪಾಧ್ಯಕ್ಷೆ ನೀಲಮ್ಮ, ಸಂಘದ ಸದಸ್ಯರು, ಷೇರುದಾರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

೬ಇಪಿ : ಹೊನ್ನಾಳಿ ತಾ ಯರೇಹಳ್ಳಿ ಪ್ರಾ ಕೃ ಪ ಸಹಕಾರ ಸಂಘದ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ  ಡಿ.ಜಿ. ಸುರೇಂದ್ರಗೌಡ ಅವರಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಿಸುವಂತೆ ಮನವಿ ಮಾಡಿದರು.
೬ಇಪಿ : ಹೊನ್ನಾಳಿ ತಾ ಯರೇಹಳ್ಳಿ ಪ್ರಾ ಕೃ ಪ ಸಹಕಾರ ಸಂಘದ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ  ಡಿ.ಜಿ. ಸುರೇಂದ್ರಗೌಡ ಅವರಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಿಸುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT