ಶುಕ್ರವಾರ, ಏಪ್ರಿಲ್ 16, 2021
31 °C

ರಾಷ್ಟ್ರೀಯ ಟೂರ್ನಿಗೆ ಹುಬ್ಬಳ್ಳಿಯ ಶೂಟರ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 10 ಶೂಟರ್‌ಗಳು ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್‌ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ಮಟ್ಟದ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಪಿಸ್ತೂಲ್‌ ವಿಭಾಗದಲ್ಲಿ ಸಿದ್ದಾರ್ಥ್‌ ದಿವಟೆ, ಸುದೀಪ್‌ ಕಾಲಾಪುರ, ಆರಿಫ್‌ ಅಹಮದ್‌ ಚಾಲಮರದ್‌, ಹರ್ಷ ಮೆಹರವಾಡೆ, ಐಶ್ವರ್ಯಾ ಬಾಲೆಹೊಸೂರ, ಜೇಫರ್‌ ಅರಲಿ, ರೈಫಲ್‌ ವಿಭಾಗದಲ್ಲಿ ಶಶಾಂಕ ದಳವಿ, ಸುಚಿತ್‌ ಭೋವಿ, ಹರ್ಷ ಭದ್ರಾಪುರ ಮತ್ತು ದಾವಲ್‌ ಪರುಲೇಕರ್‌ ರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ಟೂರ್ನಿಯಲ್ಲಿ ಸಿದ್ದಾರ್ಥ ಒಂದು ಬೆಳ್ಳಿ ಹಾಗೂ ಕಂಚು, ಸುದೀಪ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ರಾಷ್ಟ್ರೀಯ ಟೂರ್ನಿಯ ಪಿಸ್ತೂಲ್‌ ವಿಭಾಗದ ಸ್ಪರ್ಧೆಗಳು ನವದೆಹಲಿ, ರೈಫಲ್‌ ವಿಭಾಗದ ಸ್ಪರ್ಧೆಗಳು ಭೋಪಾಲ್‌ನಲ್ಲಿ ಆಯೋಜನೆಯಾಗಿವೆ.‌ ಇವರಿಗೆ ಅಕಾಡೆಮಿಯ ಕೋಚ್‌ ರವಿಚಂದ್ರ ಬಾಲೆಹೊಸೂರು ತರಬೇತಿ ನೀಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು