ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ ಲೋಕ ಅದಾಲತ್: 6,041 ಪ್ರಕರಣ ಇತ್ಯರ್ಥ

ಜಿಲ್ಲೆಯ 24 ನ್ಯಾಯಾಲಯಗಳಲ್ಲಿ ₹11.06 ಕೋಟಿ ಪರಿಹಾರ
Last Updated 28 ಮಾರ್ಚ್ 2021, 5:22 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ನಡೆದ ಬೃಹತ್ ಲೋಕ್ ಅದಾಲತ್‌ನಲ್ಲಿ 6,041 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಒಟ್ಟು 8,412 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ 6,041 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹11.06 ಕೋಟಿ ಪರಿಹಾರ ಕೊಡಿಸಲಾಯಿತು.

ಕೊರೊನಾ ಕಾರಣದಿಂದಾಗಿ ಮಾಸ್ಕ್ ಅನ್ನು ಕಡ್ಡಾಯ ಮಾಡಲಾಗಿತ್ತು. ಅಂತರವನ್ನು ಕಾಯ್ದುಕೊಂಡು ವಿಚಾರಣೆ ನಡೆಸಲಾಯಿತು.

ರಾಜೀಯಾಗಬಲ್ಲ 45 ಕ್ರಿಮಿನಲ್‌ ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹2.04 ಲಕ್ಷ ಪರಿಹಾರ ಕೊಡಿಸಲಾಗಿದೆ. 132 ಚೆಕ್‌ ಬೌನ್ಸ್‌ ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿದ್ದು, ₹2.30 ಕೋಟಿ ಪರಿಹಾರ ನೀಡುವಂತೆ ತೀರ್ಪು ನೀಡಲಾಗಿದೆ.

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ 30 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 76.15 ಲಕ್ಷ ಪರಿಹಾರ ಒದಗಿಸಲಾಯಿತು. ಬಾಕಿ 19 ಪ್ರಕರಣಗಳನ್ನು ₹ 40.41 ಲಕ್ಷ ಪರಿಹಾರ ಕೊಡಿಸಲಾಯಿತು.

ಹಣ ವಸೂಲಾತಿ ಸಂಬಂಧ 23 ಪ್ರಕರಣ ಇತ್ಯರ್ಥಪಡಿಸಿ ₹25.75 ಲಕ್ಷ ಕೊಡಿಸಲಾಯಿತು.ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ 70 ಪ್ರಕರಣಗಳು ರಾಜೀಯಲ್ಲಿ ಮುಗಿಸಲಾಯಿತು. ಸಂತ್ರಸ್ತರಿಗೆ ₹ 2.31 ಕೋಟಿ ಪರಿಹಾರ ಒದಗಿಸಲಾಯಿತು. ಕಾರ್ಮಿಕರಿಗೆ ಪರಿಹಾರ ಕೊಡಿಸುವ ಸಂಬಂಧ ಯಾವೊಂದು ಪ್ರಕರಣಗಳು ಇತ್ಯರ್ಥಗೊಂಡಿಲ್ಲ.

ವಿದ್ಯುತ್‌ಗೆ ಸಂಬಂಧಪಟ್ಟಂತೆ 150 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹5.71 ಲಕ್ಷ ಪರಿಹಾರ ಕೊಡಿಸಲಾಯಿತು. ನಿರ್ದಿಷ್ಟ ಕಾರ್ಯಕ್ಷಮತೆ ಪ್ರಕರಣ ಸಂಬಂಧ 7 ಪ್ರಕರಣಗಳು ಇತ್ಯರ್ಥಗೊಂಡು 43.87 ಲಕ್ಷ ಪರಿಹಾರ ನೀಡಲಾಯಿತು. 145 ಇತರೆ ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡು ₹1.41 ಕೋಟಿ ಪರಿಹಾರ ಕೊಡಿಸಲಾಯಿತು.

3908 ಪೆಟ್ಟಿ ಕೇಸ್‌ಗಳು ರಾಜಿಯಲ್ಲಿ ಮುಗಿದಿದ್ದು, ₹ 36.19 ಲಕ್ಷ, 41 ಇತರೆ ಅಪರಾಧ ಪ್ರಕರಣಗಳ ಸಂಬಂಧ 19.03 ಲಕ್ಷ ಪರಿಹಾರ ಕೊಡಿಸಲಾಯಿತು.

ನೀರಿನ ಬಿಲ್ಲುಗಳು, ಭೂವಿವಾದ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಗೀತಾ ಕೆ.ಬಿ. ನೇತೃತ್ವದಲ್ಲಿ ಜಿಲ್ಲೆಯ ಎಲ್ಲ 24 ನ್ಯಾಯಾಲಯಗಳಲ್ಲಿ ಬೃಹತ್ ಲೋಕ ಅದಾಲತ್ ನಡೆಯಿತು.

ಪ್ರಕರಣ ಇತ್ಯರ್ಥಗೊಳ್ಳಲು ಸಹಕರಿಸಿದ ಹಣಕಾಸಿನ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸರು, ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ ಅವರು ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT