ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಲಾಕ್ ಕಾಂಗ್ರೆಸ್‌ ಹೊನ್ನಾಳಿ ಘಟಕಕ್ಕೆ ನಾನೇ ಅಧ್ಯಕ್ಷ: ಶಿವಯೋಗಿ

Published : 11 ಸೆಪ್ಟೆಂಬರ್ 2024, 14:22 IST
Last Updated : 11 ಸೆಪ್ಟೆಂಬರ್ 2024, 14:22 IST
ಫಾಲೋ ಮಾಡಿ
Comments

ಹೊನ್ನಾಳಿ: ‘ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ನನ್ನನ್ನು  ಬ್ಲಾಕ್ ಕಾಂಗ್ರೆಸ್ ಹೊನ್ನಾಳಿ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೊನ್ನಾಳಿ ಬ್ಲಾಕ್‌ಗೆ ಬೇರೆಯವರ ಹೆಸರು ಹರಿದಾಡುತ್ತಿದೆ. ಇದು ಸರಿಯಲ್ಲ. ಈಗಲೂ ನಾನೇ ಅಧ್ಯಕ್ಷ’ ಎಂದು ಎಚ್‌.ಬಿ. ಶಿವಯೋಗಿ ಸ್ಪಷ್ಟಪಡಿಸಿದರು.

‘ನಾನು ರಾಜಕೀಯ ಕುಟುಂಬದಿಂದ ಬಂದಿದ್ದು, ನನ್ನ ತಂದೆ ದಿವಂಗತ ಎಚ್‌.ಬಿ.ಕಾಡಸಿದ್ದಪ್ಪ 11 ವರ್ಷಗಳ ಕಾಲ ಹಾಗೂ ನನ್ನ ಅಣ್ಣ ದಿವಂಗತ ಎಚ್‌.ಬಿ. ಕೃಷ್ಣಮೂರ್ತಿ ಅವರು 5 ವರ್ಷಗಳ ಕಾಲ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇಂತಹ ಕುಟುಂಬದಿಂದ ಬಂದಿರುವ ನಾನು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಶಾಸಕರು ಮತ್ತು ಮುಖಂಡರು ನನ್ನನ್ನು ಗುರುತಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ’ ಎಂದು ಹೇಳಿದರು.

ಈ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿಗೆ ಹಾಗೂ ಪಕ್ಷದ ಹೈಕಮಾಂಡ್‌ಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT