ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 24ರಂದು ಇಂಡಿಯಾ v/s ಇಂಗ್ಲೆಂಡ್‌ ಚಿತ್ರ ಬಿಡುಗಡೆ

Last Updated 11 ಜನವರಿ 2020, 13:00 IST
ಅಕ್ಷರ ಗಾತ್ರ

ದಾವಣಗೆರೆ: ವಿಭಿನ್ನ ಕಥೆಯ ಪೂರ್ವ, ಪಶ್ಚಿಮ ದೇಶದ ತಾಕಲಾಟದ ಬಗ್ಗೆ ಹೇಳುವ ‘ಇಂಡಿಯಾ v/s ಇಂಗ್ಲೆಂಡ್‌’ ಚಿತ್ರ ಜ. 24ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ದೇಶಗಳಲ್ಲಿನ ಜನರ ಬದುಕನ್ನು, ಪ್ರೀತಿ, ದ್ವೇಷವನ್ನು ಚಿತ್ರದಲ್ಲಿ ಮೊದಲ ಬಾರಿಗೆ ತೋರಿಸಲಾಗುತ್ತಿದೆ. ವಿದೇಶಗಳ ಬಗ್ಗೆ ಚಿತ್ರ ಬಂದಿದ್ದರೂ ಅಲ್ಲಿನ ಜನರ ಬಗ್ಗೆ ಇದುವರೆಗೆ ಈ ರೀತಿಯ ಕಥೆಯ ಚಿತ್ರ ಬಂದಿಲ್ಲ. ಇಂಗ್ಲೆಂಡ್‌ಗೆ ವಿಸ್ತಾರವಾದ ಕಾನ್ವಾಸ್‌ ಇದೆ. ಇಂಗ್ಲೆಂಡ್‌ನಲ್ಲಿರುವ ಭಾರತೀಯರ ಕಥೆ ಇಲ್ಲಿದೆ. ಕನಸು ನಾಗತಿಹಳ್ಳಿ ಅವರ ಕಾದಂಬರಿ ‘ಆಕ್ಷಾಂಶ ರೇಖಾಂಶ’ದ ಸಣ್ಣ ಎಳೆಯನ್ನು ಇಟ್ಟುಕೊಂಡು ಚಿತ್ರ ಮಾಡಲಾಗಿದೆ’ ಎಂದು ಹೇಳಿದರು.

ಜ. 12ರಂದು ಬೆಂಗಳೂರಿನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಅಮೆರಿಕ, ಯುರೋಪ್‌, ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹಿರಿಯ ನಟ ಅನಂತ್‌ನಾಗ್‌, ಸುಮಲತಾ ಅಂಬರೀಷ್‌, ಪ್ರಕಾಶ್‌ ಬೆಳವಾಡಿ, ಸಾಧು ಕೋಕಿಲ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂಗ್ಲೆಂಡ್‌ ಸೇರಿ ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸತ್ಯ ಹೆಗಡೆ, ಕೃಷ್ಣಕುಮಾರ್‌ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಶ್ರೀಕಾಂತ ಸಂಕಲನ ಚಿತ್ರಕ್ಕಿದೆ ಎಂದು ವಿವರಿಸಿದರು.

ಚಿತ್ರದ ನಾಯಕ ನಟಿ ಮಾನ್ವಿತಾ ಹರೀಶ್‌, ‘ಚಿತ್ರದಲ್ಲಿ ಉತ್ತಮ ಪಾತ್ರವಿದ್ದು, ಹೆಣ್ಣಿಗೆ ಪ್ರಾಮುಖ್ಯ ನೀಡುವ ಪಾತ್ರವನ್ನು ನಿರ್ದೇಶಕರು ನೀಡಿದ್ದು ಖುಷಿ ಇದೆ’ ಎಂದರು.

ನಾಯಕ ನಟ ವಸಿಷ್ಠ ಸಿಂಹ, ‘ಮೊದಲ ಬಾರಿಗೆ ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ಹೆಚ್ಚಿನ ಅನುಭವ ಕೊಟ್ಟಿದೆ. ಅನಿವಾಸಿ ಕನ್ನಡಿಗ ಪಾತ್ರ ಮಾಡಿದ್ದೇನೆ. ನಾಗತಿಹಳ್ಳಿ ಚಂದ್ರಶೇಖರ್‌ ನಾಯಕನಾಗಿ ಓಂಕಾರ ಬರೆದಿದ್ದಾರೆ’ ಎಂದರು.

ಕಲಾವಿದ ಅರುಣ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT