ಶನಿವಾರ, ಮಾರ್ಚ್ 25, 2023
22 °C

ಎಂಎಸ್‌ಪಿ ಕಾಯ್ದೆ ಬಂದರೆ ರೈತರಿಗೆ ನ್ಯಾಯ: ಹುಚ್ಚವನಹಳ್ಳಿ ಮಂಜುನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿ ಮಾಡಿದರೆ ರೈತರಿಗೆ ನ್ಯಾಯ ಸಿಗಲಿದೆ. ಅದಕ್ಕಾಗಿ ರೈತರು ಹೋರಾಟ ಮಾಡಬೇಕು ಎಂದು ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಹೇಳಿದರು.

ತಾಲ್ಲೂಕಿನ ಚಿಕ್ಕ ತೊಗಲೇರಿ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರುಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಮೆಕ್ಕೆ ಜೋಳಕ್ಕೆ ₹ 1,860 ಹಾಗೂ ಭತ್ತಕ್ಕೆ ₹ 1,890 ನಿಗದಿ ಮಾಡಿದೆ. ಆದರೆ ಖರೀದಿದಾರರು ₹ 1,200 ಮೆಕ್ಕೆಜೋಳ, ₹ 1,491 ರೂ ಭತ್ತ ಖರೀದಿ ಮಾಡುತ್ತಾರೆ. ಇದರಿಂದ ರೈತ ನಷ್ಟವುಂಟಾಗುತ್ತಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್ ಮಾತನಾಡಿ, ‘ಮೆಕ್ಕೆಜೋಳ ಹಾಗೂ ಭತ್ತ ಕಟಾವಿಗೆ ಬಂದಿದ್ದು, ದಿನೇ ದಿನೇ ಮಾರುಕಟ್ಟೆಯಲ್ಲಿ ದರ ಕುಸಿಯುತ್ತಿದೆ. ರೈತರು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ರೈತರು ಹಳ್ಳಿ ಹಳ್ಳಿಗಳಲ್ಲಿಯೂ ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ತೊಗಲೇರಿ ಕೆಂಚಪ್ಪ ನೀರ್ಥಡಿ ತಿಪ್ಪೇಶ್, ದೇವರಾಜ್ ತಳವಾರ, ಹುಚ್ಚವ್ವನಹಳ್ಳಿ ಪ್ರಕಾಶ್, ಕೆಂಚಮ್ಮನಹಳ್ಳಿ ಹನುಮಂತ್, ಸಿದ್ದಪ್ಪ ನಾಯಕ, ಕೋಲ್ಕುಂಟೆ ಹುಚ್ಚಂಗಪ್ಪ ಹಾಗೂ ಗ್ರಾಮದ ಮುಖಂಡರಾದ ತೋಟದ ಚಂದ್ರಪ್ಪ , ಮಾಯಕೊಂಡ ರಂಗಪ್ಪ ತೋಟದರ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು