ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸ್ಕೌಟ್ಸ್‌, ಗೈಡ್ಸ್‌ನಿಂದ ‘ಕರ್ನಾಟಕ ದರ್ಶನ’ ಕಾರ್ಯಕ್ರಮ

Last Updated 28 ನವೆಂಬರ್ 2021, 4:37 IST
ಅಕ್ಷರ ಗಾತ್ರ

ದಾವಣಗೆರೆ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ದಕ್ಷಿಣ ವಲಯ, ನೇತಾಜಿ ಸ್ಕೌಟ್ಸ್‌ ಗ್ರೂಪ್‌, ಚೇತನ ಗೈಡ್ಸ್‌ ಗ್ರೂಪ್‌ ವತಿಯಿಂದ ಪಿ.ಜೆ. ಬಡಾವಣೆಯಲ್ಲಿ ಇರುವ ಬಾಪೂಜಿ ಶಾಲೆಯಲ್ಲಿ ‘ಕರ್ನಾಟಕ ದರ್ಶನ’ ಕಾರ್ಯಕ್ರಮ ಶನಿವಾರ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ರಾಜ್ಯದ ವಿವಿಧ ಜಿಲ್ಲೆಗಳನ್ನು ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ವೇಷಭೂಷಣಗಳ ಮೂಲಕ ಪ್ರದರ್ಶಿಸಿದರು.

ಗಣ್ಯರಾದ ಎ.ಪಿ. ಷಡಾಕ್ಷರಪ್ಪ, ಮೆಹಬೂಬ್‌ ಅಲಿ, ರತ್ನಮ್ಮ, ಬಾಪೂಜಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೊಟ್ರಮ್ಮ ಉಪಸ್ಥಿತರಿದ್ದರು. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ದಕ್ಷಿಣ ವಲಯ ಅಧ್ಯಕ್ಷ ಎ.ಆರ್‌. ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು.

ನಾಡದೇವತೆಗೆ ಪೂಜೆ ಸಲ್ಲಿಸಿ ಡೊಳ್ಳು ಕುಣಿತ ಸಹಿತ ವಿವಿಧ ವಾದ್ಯ, ನೃತ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು ಎಂದು ಜೆ.ಎಸ್‌. ವಿಜಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT