ಗುರುವಾರ , ಮೇ 13, 2021
18 °C

ಮಾಜಿ ಸಚಿವ ಯು.ಟಿ. ಖಾದರ್‌ ಕಾರು ಮತ್ತು ಕಂಟೇನರ್ ಲಾರಿ ಅಪಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ದಾವಣಗೆರೆ: ಬೆಂಗಳೂರಿನಿಂದ ಬೆಳಗಾವಿ ತೆರಳುತ್ತಿದ್ದ ಮಂಗಳೂರಿನ ಶಾಸಕ ಯು.ಟಿ. ಖಾದರ್‌ ಅವರಿದ್ದ ಕಾರು ತಾಲ್ಲೂಕಿನ ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿದೆ. ಕಾರಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲು ಖಾದರ್‌ ತೆರಳುತ್ತಿದ್ದರು. ಆಪ್ತ ಕಾರ್ಯದರ್ಶಿ ಲಿಫ್‌ಜತ್‌ ಕಾರು ಚಲಾಯಿಸುತ್ತಿದ್ದರು. ಆನಗೋಡು ಬಳಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಮುಂದೆ ಹೋಗುತ್ತಿದ್ದ ಲಾರಿ ಏಕಾಏಕಿ ಬ್ರೇಕ್‌ ಹಾಕಿದ್ದರಿಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಯು.ಟಿ. ಖಾದರ್‌, ಲಿಫ್‌ಜತ್‌ ಮತ್ತು ಮಂಜನಾಡಿ ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಮುಂಭಾಗ ಜಖಂಗೊಂಡಿದೆ. ಯಾವುದೇ ಅಪಾಯ ಆಗದಿರುವುದರಿಂದ ಪ್ರಕರಣ ದಾಖಲಿಸದೇ ಲಾರಿಯನ್ನು ಮುಂದೆ ಹೋಗಲು ಬಿಡಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಅಬ್ದುಲ್‌ ಜಬ್ಬಾರ್‌ ಕಳುಹಿಸಿಕೊಟ್ಟ ಇನ್ನೊಂದು ಕಾರಿನಲ್ಲಿ ಖಾದರ್‌ ಬೆಂಗಳೂರಿಗೆ ವಾಪಸ್ಸಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು