ಮಂಗಳವಾರ, ನವೆಂಬರ್ 19, 2019
23 °C

ಕನಕ ಜಯಂತಿ ರದ್ದು ಮಾಡಲು ಕುರುಬ ಸಮುದಾಯ ಮುಖಂಡರ ಆಗ್ರಹ

Published:
Updated:

ದಾವಣಗೆರೆ: ಮುಂದಿನ ವರ್ಷದಿಂದ ಕನಕ ಜಯಂತಿ ರದ್ದು ಮಾಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಕುರುಬ ಸಮಾಜದ ಮುಖಂಡರು ಜಿಲ್ಲಾಧಿಕಾರಿಗೆ ಆಗ್ರಹಿಸಿದರು. ಕನಕ ಜಯಂತಿ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಈ ವಿಚಾರವನ್ನು ಜಿಲ್ಲಾಧಿಕಾರಿಗೆ ತಿಳಿಸಿದರು.  

ಸಮಾಜದ ಮುಖಂಡರಾದ ಪರಶುರಾಮಪ್ಪ ಅವರು, ‘ಪ್ರತಿಯೊಂದು ಜಾತಿಯವರಿಗೂ ಒಂದೊಂದು ಜಯಂತಿ ಇದೆ. ‍ಪ್ರತಿ ಜಯಂತಿಗೂ ಒಂದೊಂದು ದಿನ ರಜೆ ನೀಡುವುದು ಬೇಡ. ಟಿಪ್ಪು ಜಯಂತಿ ಆರಂಭಿಸಿ ಸರ್ಕಾರ ಈಗ ರದ್ದು ಮಾಡಲು ಹೊರಟಿದೆ. ನಮ್ಮ ಸಮಾಜಕ್ಕೂ ಹೀಗಾಗುವುದು ಬೇಡ, ಮಹಾನ್ ನಾಯಕರ ಜಯಂತಿಗಳು ಈಗ ಜಾತಿಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ,’ ಎಂದು ಹೇಳಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು. ಸಭೆಯಲ್ಲಿ ಕೆಂಗೊ ಹನುಮಂತಪ್ಪ ಸೇರಿದಂತೆ ಕುರುಬ ಸಮಾಜದ ಹಲವು ಮುಖಂಡರು ಹಾಜರಿದ್ದರು.

ಪ್ರತಿಕ್ರಿಯಿಸಿ (+)