ದಾವಣಗೆರೆ: ವೀರಶೈವ ಲಿಂಗಾಯತಕ್ಕೆ ಶತಮಾನ ಕಳೆದರೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದಿಲ್ಲ. ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯುವ ಅರ್ಹತೆ ಇದೆ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಅಭಿಪ್ರಾಯಪಟ್ಟರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಮಾತೆ ಮಹಾದೇವಿ ಇದಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ನಡೆಯಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಗುರು–ವಿರಕ್ತ ಪರಂಪರೆ ಒಗ್ಗೂಡುವುದಕ್ಕೆ ವಿರೋಧವಿಲ್ಲ. ಆದರೆ, ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವ ಬೆಂಬಲಿಸುವುದಿಲ್ಲ. 12ನೇ ಶತಮಾನದಲ್ಲಿ ಧರ್ಮ ಸ್ಥಾಪನೆ ಮಾಡಿದ ಬಸವಣ್ಣನವರನ್ನು ಧರ್ಮಗುರು, ವಚನಗಳನ್ನು ಧರ್ಮಗ್ರಂಥ ಹಾಗೂ ಕೂಡಲಸಂಗಮವನ್ನು ಧರ್ಮಕ್ಷೇತ್ರ ಎಂಬುದಾಗಿ ಒಪ್ಪಿಕೊಳ್ಳುವವರೊಂದಿಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇದಕ್ಕೆ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸಿದ್ಧರಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಜೀವನಕ್ರಮ. ಭಾರತದಲ್ಲಿ ಜನಿಸಿದ ಬಹುತೇಕರು ಸಾಂಸ್ಕೃತಿಕವಾಗಿ ಹಿಂದೂಗಳೇ ಆಗಿರುತ್ತಾರೆ. ಪುರಾಣದ ಕಾಲ್ಪನಿಕ ದೇವರುಗಳನ್ನು ಲಿಂಗಾಯತರು ಪೂಜೆ ಮಾಡುವುದಿಲ್ಲ. ಗುರು–ಲಿಂಗ ಪೂಜೆ ಮಾತ್ರ ಲಿಂಗಾಯತರ ಧಾರ್ಮಿಕ ಆಚರಣೆ. ಮುಖವಾಡ ಧರಿಸಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವವರ ಬಗ್ಗೆ ಎಚ್ಚರದಿಂದ ಇರುವ ಅಗತ್ಯವಿದೆ’ ಎಂದರು.

‘ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿದೆ. ಬಸವ ಭಕ್ತರಲ್ಲಿ ಜಾಗೃತಿ ಮೂಡಿಸಿದೆ. ಇದನ್ನು ಸಹಿಸದ ಕೆಲ ಶಕ್ತಿಗಳು ಅಪಪ್ರಚಾರ, ನಕಾರಾತ್ಮಕ ಭಾವನೆಗಳನ್ನು ಭಿತ್ತುತ್ತಿವೆ. ಇದಕ್ಕೆ ಬಸವ ಭಕ್ತರು ಕಿವಿಗೊಡುವ ಅಗತ್ಯವಿಲ್ಲ. ನ.11ರಂದು ಕೂಡಲಸಂಗಮದಲ್ಲಿ ಚಿಂತನ–ಮಂಥನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತ್ಯೇಕ ಧರ್ಮದ ಹೋರಾಟದ ರೂಪುರೇಷಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ’ ಎಂದರು.

‘ಶಾಸಕ ಬಸವಗೌಡ ಪಾಟೀಲ ಯತ್ನಾಳ ಹಾಗೂ ಚಕ್ರವರ್ತಿ ಸೂಲಿಬೇಲಿ ಅವರಿಗೆ ಲಿಂಗಾಯತರ ಹೋರಾಟ ಸಹಿಸಿಕೊಳ್ಳಲು ಆಗುತ್ತಿಲ್ಲ. ವಚನ ಸಾಹಿತ್ಯದ ಬಗ್ಗೆ ಅರಿಯದ ಅವರು ಪ್ರತ್ಯೇಕ ಧರ್ಮದ ಹೋರಾಟ ವಿರೋಧ ಮಾಡುತ್ತಿರುವುದು ಖಂಡನೀಯ’ ಎಂದು ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿಗೆ ನಿರ್ಣಯ

ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮೀಜಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕರು, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮ್ಮೇಳನ ನಿರ್ಣಯ ಕೈಗೊಂಡಿದೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ದೆಹಲಿಯಲ್ಲಿ ರ್ಯಾಲಿ ನಡೆಸಬೇಕು. ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಮಾನ್ಯತೆ ಸಿಗಬೇಕು. ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಕೂಡ ವಚನ ಸಾಹಿತ್ಯ ಪ್ರಚುರಪಡಿಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಮರುಪರಿಶೀಲಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು.

ಜ.12ರಿಂದ ಶರಣ ಮೇಳ

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ಜ.12ರಿಂದ 14ರವರೆಗೆ ಕೂಡಲಸಂಗಮದಲ್ಲಿ ಶರಣ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾತೆ ಗಂಗಾದೇವಿ ತಿಳಿಸಿದರು.

‘ವರ್ಷಕ್ಕೊಮ್ಮೆ ನಡೆಯುವ ಶರಣ ಮೇಳಕ್ಕೆ ರಾಜ್ಯದ ವಿವಿಧೆಡೆಯಿಂದ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. 108 ವಚನಗಳ ಪಾರಾಯಣ, ಪ್ರಾರ್ಥನೆ ಹಾಗೂ ಪೀಠಾರೋಹಣ ಕಾರ್ಯಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

ಒಡೆದು ಹಾಕಲು ಧರ್ಮವೇನು ಮಡಿಕೆಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಕಾರ್ಯಕ್ಕೆ ಎಂದಿಗೂ ಕೈಹಾಕಿಲ್ಲ. ಬಸವಣ್ಣನವರ ಮೇಲೆ ಅವರಿಗೆ ಅಪಾರ ಅಭಿಮಾನವಿದೆ
ಮಾತೆ ಗಂಗಾದೇವಿ, ಪೀಠಾಧ್ಯಕ್ಷೆ, ಬಸವಧರ್ಮ ಪೀಠ, ಕೂಡಲಸಂಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.