ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆ ಮಹತ್ವ ಸಾರಿದ ದವನ್‌ ವಿದ್ಯಾರ್ಥಿಗಳು

Last Updated 26 ಮಾರ್ಚ್ 2019, 12:17 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ದವನ್‌ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನ ತೃತೀಯ ಬಿ.ಕಾಂ ವಿದ್ಯಾರ್ಥಿಗಳು ಸಂಪನ್ಮೂಲ ಕೊರತೆಯಿಂದ ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ಕುರಿತು ಡಿ.ಆರ್‌.ಎಂ ವಿಜ್ಞಾನ ಕಾಲೇಜಿನಲ್ಲಿ ‘ನುಕ್ಕಡ್‌’ ಬೀದಿ ನಾಟಕವನ್ನು ಮಂಗಳವಾರ ಪ್ರದರ್ಶಿಸುವ ಮೂಲಕ ಜನಜಾಗೃತಿ ಮೂಡಿಸಿದರು.

ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಂದಾಗಿ ಅನೇಕ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಅವರಿಗೆ ವಿದ್ಯಾವಂತ ಯುವಕರು ಪ್ರಾಥಮಿಕ ಹಂತದಿಂದ ಅಕ್ಷರಾಭ್ಯಾಸ ಮಾಡಿಸಿದರೆ ನಾಡಿನಲ್ಲಿ ಅನಕ್ಷರತೆ ದೂರ ಮಾಡಬಹುದು ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಸಾರಿದರು.

ಏಪ್ರಿಲ್‌ 4ರಂದು ನಡೆಯಲಿರುವ ‘ಸ್ಫೂರ್ತಿ ಯುವ ಉತ್ಸವ’ದ ಅಂಗವಾಗಿ ‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ’ (ಎಸ್‌.ಎಸ್‌.ಆರ್‌.) ತತ್ವದಡಿ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಶಿಕ್ಷಣದಿಂದ ವಂಚಿತರನ್ನೂ ಸಾಕ್ಷರರನ್ನಾಗಿ ಮಾಡುವ ಬಗ್ಗೆ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು. ಕೇವಲ ವೈಯಕ್ತಿಕ ಸಂತೋಷಕ್ಕೆ ಸಮಯ ಹಾಳುಮಾಡುವ ಯುವಕರು ಅನಕ್ಷರಸ್ಥರಿಗಾಗಿ ಸಮಯ ಮೀಸಲಿಟ್ಟರೆ ಎಲ್ಲರಿಗೂ ಶಿಕ್ಷಣ ದೊರಕಿಸಿಕೊಡಲು ಸಾಧ್ಯ ಎಂಬುದನ್ನು ನಾಟಕದ ಮೂಲಕ ತೋರಿಸಿಕೊಟ್ಟರು.

ವಿದ್ಯಾರ್ಥಿಗಳಾದ ಬಿ. ನಿಧಿ , ಎನ್‌. ರಿದ್ಧಿ, ಎಸ್‌.ಎಚ್‌. ಪೂಜಾ, ಸುಷ್ಮಾ, ಕೆ. ಪೂಜಾ, ಸಿದ್ಧಾರ್ಥ, ಉದಯ್‌ ಭಾಸ್ಕರ್‌, ಸ್ವಾತಿ, ದೀಪ್ತಿ, ಅನುಷಾ ಬೀದಿ ನಾಟಕ ಪ್ರದರ್ಶಿಸಿದರು.

ಕಾಲೇಜಿನ ಕಾರ್ಯದರ್ಶಿ ವೀರೇಶ್‌ ಪಟೇಲ್‌, ನಿರ್ದೇಶಕ ಹರ್ಷರಾಜ್‌ ಗುಜ್ಜರ್‌, ಸಂಯೋಜಕ ಡಾ. ಜಿ.ಎಸ್‌. ಅಂಜು, ಪ್ರಾಂಶುಪಾಲ ಡಾ. ಶಿಲ್ಪಾ ಮುರುಗೇಶ್‌, ಡೀನ್‌ ನಂದೀಶ್ವರ, ಬಿ.ಬಿ.ಎಂ ವಿಭಾಗದ ಮುಖ್ಯಸ್ಥ ಬಿ.ಸಿ. ಶಂಕರ್‌, ಬಿ.ಸಿ.ಎ. ಮುಖ್ಯಸ್ಥೆ ಆರ್‌.ವೈ. ಶಿಲ್ಪಾ, ತರಗತಿ ಮುಖ್ಯಸ್ಥರಾದ ಜಿ.ಬಿ. ಚಂದನ್‌ ಮಾರ್ಗದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT