ಜಗಳೂರು: ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಮೆಗಾ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವ್ಯಾಜ್ಯ ಹಾಗೂ ವ್ಯಾಜ್ಯ ಪೂರ್ವ ಹಂತದ 6,000ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದ್ದು, ₹ 85 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ವಸೂಲು ಮಾಡಲಾಗಿದೆ.

ಸಿವಿಲ್ ಮತ್ತು ಜೆ.ಎಂ.ಎಫ್ ನ್ಯಾಯಾಧೀಶ ಆರ್. ಚೇತನ್ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಬ್ಯಾಂಕ್ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ವ್ಯಾಜ್ಯಪೂರ್ವ 5,562 ಪ್ರಕರಣಗಳು ಇತ್ಯರ್ಥವಾಗಿದ್ದು, ₹ 30 ಲಕ್ಷ ವಸೂಲಾಗಿದೆ.

‘ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದ 20 ಚೆಕ್ ಬೌನ್ಸ್ ಪ್ರಕರಣಗಳು, ಒಂದು ಹಣದ ವಸೂಲಿ ದಾವೆ ಹಾಗೂ 6 ಪಾಲು ವಿಭಾಗ ಮತ್ತು 130 ಜನನ ಪ್ರಮಾಣಪತ್ರ, 395 ಲಘು ಪ್ರಕರಣ ಸೇರಿ ಒಟ್ಟು 567 ಪ್ರಕರಣಗಳು ಇತ್ಯರ್ಥವಾಗಿವೆ. ಇದರಲ್ಲಿ ರಾಜಿ ಆಗಬಲ್ಲ 9 ಕ್ರಿಮಿನಲ್ ಪ್ರಕರಣಗಳು ಒಳಗೊಂಡಿವೆ’ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಮೂಲಗಳು ತಿಳಿಸಿವೆ.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಕಾರ್ಯದರ್ಶಿ ಪರಶುರಾಮ್ ಎ.ಕೆ, ಕೆನರಾಬ್ಯಾಂಕ್ ಅಧಿಕಾರಿಗಳಾದ ಅಣಬೂರು ಶಾಖೆಯ ಹಣಮಂತ ಬೈರಗೊಂಡ, ಜಗಳೂರು ಶಾಖೆಯ ಮಾರೆಪ್ಪ ಎನ್, ಬಿಳಿಚೋಡು ಶಾಖೆಯ ಸಂಜಯ್ ಹಾಗೂ ಅಸಗೋಡು ಶಾಖೆಯ ಸುರೇಶ್ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಕಕ್ಷಿದಾರರು ಭಾಗವಹಿಸಿದ್ದರು.