ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ 29,081 ಯುವ ಮತದಾರರು: ಜಿಲ್ಲಾಧಿಕಾರಿ ವೆಂಕಟೇಶ್

ಅಂತಿಮ ಮತದಾರರ ಪಟ್ಟಿ ಪ್ರಕಟ- ಜಿಲ್ಲೆಯಲ್ಲಿ 14,58,594 ಮತದಾರರು
Published 23 ಜನವರಿ 2024, 6:50 IST
Last Updated 23 ಜನವರಿ 2024, 6:50 IST
ಅಕ್ಷರ ಗಾತ್ರ

ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಅ.27ರಿಂದ ಜನವರಿ 22ರವರೆಗೆ 9,771 ಮತದಾರರು ಸೇರ್ಪಡೆಯಾಗಿದ್ದು, 29,081 ಯುವ ಮತದಾರರಿದ್ದಾರೆ. ಜಿಲ್ಲೆಯಲ್ಲಿ 14,58,594 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮತದಾರರ ಪಟ್ಟಿ ಪ್ರಚುರಪಡಿಸಿದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಿದರು.

ಆಯೋಗದ ನಿರ್ದೇಶನದನ್ವಯ ಅಕ್ಟೋಬರ್ 27ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 14,53,818 ಮತದಾರರಿದ್ದರು. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 2024ರ ಜನವರಿ 12 ರವರೆಗೆ ಅವಕಾಶ ಕಲ್ಪಿಸಲಾಗಿದ್ದು ಈ ವೇಳೆ ಹೊಸ ನೊಂದಣಿ, ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಹಾಗೂ ಮರಣ ಹೊಂದಿದವರನ್ನು ಪಟ್ಟಿಯಿಂದ ರದ್ದುಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 7,27,246 ಪುರುಷ, 7,31,230 ಮಹಿಳೆಯವರು, 118 ಇತರೆ ಸೇರಿ 14,58,594 ಮತದಾರರಿದ್ದಾರೆ. ಮತದಾರರ ಪಟ್ಟಿಯನ್ನು ಎಲ್ಲಾ ತಹಶೀಲ್ದಾರರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರು ತಮ್ಮ ಮತದಾರರ ವಿವರವನ್ನು ಪರಿಶೀಲಿಸಿಕೊಳ್ಳಬೇಕೆಂದರು.

ಪರಿಷ್ಕರಣೆಯ ವೇಳೆ ಒಟ್ಟು 18,714 ಮತದಾರರನ್ನು ದಾಖಲೆಗಳ ಪರಿಶೀಲನೆ ಮಾಡಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅವರಲ್ಲಿ ಶೇ 90ರಷ್ಟು ಮರಣ ಹೊಂದಿದವರು ಹಾಗೂ ಎರಡೂ ಕಡೆ ಪಟ್ಟಿಯಲ್ಲಿ ಸೇರ್ಪಡೆಯಾದವುಗಳಾಗಿರುತ್ತವೆ.

ಯುವ ಮತದಾರರ ನೋಂದಣಿ;

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ಸೇರ್ಪಡೆಯಾದವರಲ್ಲಿ ಜಗಳೂರು ಕ್ಷೇತ್ರದಲ್ಲಿ 4,239, ಹರಿಹರ 4,646, ದಾವಣಗೆರೆ ಉತ್ತರ 4,032, ದಾವಣಗೆರೆ ದಕ್ಷಿಣ 3,581, ಮಾಯಕೊಂಡ 4,176, ಚನ್ನಗಿರಿ 3,884 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ 4,523 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ನೊಂದಾಯಿಸಿದ್ದಾರೆ.

18 ವರ್ಷ ತುಂಬುವರು ನೊಂದಣಿಗೆ ಅವಕಾಶ; ಹೊಸ ಮತದಾರರು ಆನ್‍ಲೈನ್ ಮೂಲಕ ವೋಟರ್ ಹೆಲ್ಪ್‌ಲೈನ್ https;//voters.eci.gov.in ಹಾಗೂ https;//ceo.karnataka.gov.in ನಲ್ಲಿ ನೊಂದಾಯಿಸಬಹುದಾಗಿದ್ದು 2024ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಇರುತ್ತದೆ. ಆದರೆ ಚುನಾವಣೆ ವೇಳಾಪಟ್ಟಿ ಒಳಗೆ 18 ವರ್ಷ ತುಂಬುವವರು ಮಾತ್ರ ಮತದಾನ ಮಾಡಲು ಅರ್ಹರಾಗುತ್ತಾರೆ. ಮತದಾರರು ಯಾವುದೇ ಸಹಾಯ ಬೇಕಿದ್ದಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆ 1950ಗೆ ಕರೆ ಮಾಡಬಹುದಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಮಹಾನಗರ ಪಾಲಿಕೆ ಆಯುಕ್ಷೆ, ಮುಖಂಡರಾದ ಆವರೆಗೆರೆ ವಾಸು, ರೇಣುಕಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಉತ್ತರದಲ್ಲಿ ಹೆಚ್ಚು ಮತದಾರರು:

ಅಂತಿಮ ಮತದಾರರ ಪಟ್ಟಿಯನ್ವಯ ದಾವಣಗೆರೆ ಉತ್ತರದಲ್ಲಿ 2.45 ಲಕ್ಷ ಮತದಾರರು ಇದ್ದು, ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಮಾಯಕೊಂಡದಲ್ಲಿ 1.92 ಲಕ್ಷ ಮತದಾರರಿದ್ದು, ಕಡಿಮೆ ಮತದಾರರನ್ನು ಹೊಂದಿದ್ದಾರೆ.

ಮತದಾರರ ಅಂತಿಮ ಪಟ್ಟಿ:

ಕ್ಷೇತ್ರ;ಮತಗಟ್ಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT