ಮಧುಸೂದನ್ ‘ಹರಿಹರ ಕಂಠೀರವ’

ಹರಿಹರ: ಇಲ್ಲಿನ ನಾಡಬಂದ್ ಷಾವಲಿ ಗರಡಿ ಕುಸ್ತಿ ಜೀರ್ಣೋದ್ಧಾರ ಸಮಿತಿಯಿಂದ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 86 ಕೆ.ಜಿಯಿಂದ 125 ಕೆ.ಜಿವರೆಗಿನ ವಿಭಾಗದಲ್ಲಿ ದಾವಣಗೆರೆಯ ಕ್ರೀಡಾ ನಿಲಯದ ಕುಸ್ತಿಪಟು ಮಧುಸೂದನ್ ಅವರು ‘ಹರಿಹರ ಕಂಠೀರವ –2020’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯಾವಳಿಯ ಫೈನಲ್ನಲ್ಲಿ ನಾಗರಾಜ್ ಬೆಳಗಾವಿ ಅವರ ವಿರುದ್ಧ 10–6 ಪಾಯಿಂಟ್ಸ್ ಅಂತರದಿಂದ ಗೆದ್ದು ಬೆಳ್ಳಿ ಗದೆ ಹಾಗೂ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.
ಮಧುಸೂದನ್ ಅವರು ಕುಸ್ತಿ ತರಬೇತುದಾರ ಶಿವಾನಂದ್ ಅವರ ಶಿಷ್ಯ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಬಿ.ಶ್ರೀನಿವಾಸ್ ಅಭಿನಂದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.