ಮಲೇಬೆನ್ನೂರು: ‘ಸಹಕಾರ ಕ್ಷೇತ್ರಾಭಿವೃದ್ಧಿಗೆ ಅಧ್ಯಯನಶೀಲತೆ, ಅಭ್ಯಾಸ ವರ್ಗ ಅಗತ್ಯ’ ಎಂದು ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎಚ್.ಎಸ್. ಮಹೇಶ್ ಕೋರಿದರು.

ಪಟ್ಟಣದ ನಂದಿ ಸೌಹಾರ್ದ ಸಹಕಾರ ಸಂಘದಲ್ಲಿ ಬುಧವಾರ ಹರಿಹರ ತಾಲ್ಲೂಕು ‘ಸಹಕಾರ ಭಾರತಿ ಅಭ್ಯಾಸ ವರ್ಗ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಂಘಟನೆ ಜಾತೀಯತೆಯಿಂದ ದೂರವಿದೆ. ರಾಜಕೀಯ ಸಹಕಾರ ಬೇರೆಬೇರೆಯಾಗಿದೆ. ಸಹಕಾರ ಕ್ಷೇತ್ರಕ್ಕೆ ರಾಜ್ಯ, ಕೇಂದ್ರ ಸರ್ಕಾರ ಹೆಚ್ಚಿನ ಸಹಾಯ ಮಾಡುತ್ತಿದೆ. ತುಮ್ಕೋಸ್, ಮ್ಯಾಮ್ಕೋಸ್, ಕ್ಯಾಂಪ್ಕೊದಂತಹ ಹಲವಾರು ಸಂಸ್ಥೆಗಳು ಲಾಭ ಪಡೆದು ಮುಂದೆ ಬಂದಿವೆ. ಸಹಕಾರ ಕ್ಷೇತ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಚಿವ ಅಮಿತ್ ಶಾ ಒತ್ತು ನೀಡುತ್ತಿದ್ದಾರೆ. ಗ್ರಾಮೀಣ ಯುವಕ ಯುವತಿಯರು ಸಹಕಾರಿ ಧುರೀಣರು ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳಬೇಕಿದೆ’ ಎಂದರು.

ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಸ್. ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ, ವೈದ್ಯ ಬೆಣ್ಣೆಹಳ್ಳಿ ಚಂದ್ರಶೇಖರ್, ಜಿಲ್ಲಾ ಘಟಕದ ಮಹಿಳಾ ಪ್ರಮುಖ್ ಬಿ.ಎಚ್. ಪುಷ್ಪಾವತಿ ಮಾತನಾಡಿದರು.

ಸಹಕಾರ ಭಾರತಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರಪ್ಪ, ಇಂದೂಧರ್ ಎನ್. ರುದ್ರಗೌಡ, ವಕೀಲ ತಿಮ್ಮನಗೌಡ, ಜಿಗಳೇರ ಹಾಲೇಶ್, ಎಚ್.ಟಿ. ಪರಮೇಶ್ವರಪ್ಪ, ಬಿ.ಎಚ್. ರವಿ, ಸಂತೋಷ್, ಬೆಳ್ಳೂಡಿ ರಾಮಚಂದ್ರಪ್ಪ, ಮಂಜುನಾಥ್ ಪಟೇಲ್, ಐನಳ್ಳಿ ಶುಭಾ, ಶಿವಕುಮಾರ್, ಜಿ.ಪಿ. ಹನುಮಗೌಡ, ಗಿರೀಶ್ ಅಂಗಡಿ, ಸಹಕಾರ ರಂಗದ ವಿವಿಧ ವಿಭಾಗದ 200ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.

ಸಹಕಾರ ಭಾರತಿ ಪರಿಚಯ ಕುರಿತು ಹಾಲು ಒಕ್ಕೂಟದ ಎಚ್.ಕೆ. ಫಾಲಾಕ್ಷಪ್ಪ ಹಾಗೂ ‘ವಿಕಸಿತ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಕುರಿತು ಎಚ್.ಎಸ್. ಮಂಜುನಾಥ್ ಕುರ್ಕಿ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.