ದಾವಣಗೆರೆ: ನ್ಯೂ ದಾವಣಗೆರೆ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನವರ ಬೇಜವಾಬ್ದಾರಿಯಿಂದಾಗಿ ಕೆಲವರು ಸ್ಪರ್ಧಿಗಳು ರಾಜ್ಯಮಟ್ಟದ ಸ್ಪರ್ಧೆಯಿಂದ ಹೊರಗೆ ಉಳಿದಿದ್ದಾರೆ.
‘ನ.9ರಿಂದ 12ರವರೆಗೆ ಮಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದ್ದು, ಜಿಲ್ಲೆಯಲ್ಲಿ ವಿವಿಧ ವಿಭಾಗಗಳಲ್ಲಿ 12 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಸೋಸಿಯೇಷನ್ ಅವರು ಪಟ್ಟಿಯನ್ನು ಅಪ್‌ಲೋಡ್ ಮಾಡದೇ ಇರುವುದರಿಂದ ಕೆಲವರು ಅವಕಾಶದಿಂದ ವಂಚಿತರಾಗಿದ್ದಾರೆ’ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.
‘5 ವರ್ಷದಿಂದ 7, 7ರಿಂದ 9, 9ರಿಂದ 11 ಹಾಗೂ 11ರಿಂದ 14 ವರ್ಷಗಳ ವಿಭಾಗಗಳಲ್ಲಿ ಜಿಲ್ಲಾ ಮಟ್ಟದಿಂದ ಆಯ್ಕೆಯಾದ ಪ್ರಥಮ, ದ್ವಿತೀಯ ಹಾಗೂ ಮೂರನೇ ಸ್ಥಾನ ಪಡೆದಿರುವ 12 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು. ರಾಜ್ಯಮಟ್ಟದ ಸ್ಪರ್ಧೆ ನಡೆಯುವ ಬಗ್ಗೆ ನಮಗೆ ಮಾಹಿತಿಯನ್ನೇ ನೀಡಿಲ್ಲ. ಶುಲ್ಕ ಕಟ್ಟದೇ ಇರುವುದರಿಂದ 8 ಜಿಲ್ಲೆಗಳನ್ನು ಹೊರಹಾಕಿದ್ದಾರೆ ಎಂದು ಅಸೋಸಿಯೇಷನ್‌ನವರು ಹೇಳುತ್ತಿದ್ದಾರೆ’ ಎಂದು ಪೋಷಕರಲ್ಲಿ ಒಬ್ಬರಾದ ಡಾ.ಲಕ್ಷ್ಮಿ ಆರೋಪಿಸಿದರು.
ರಾಜ್ಯಮಟ್ಟದ ಗುಂಪುಗಳಲ್ಲಿ, ವರ್ಷಕ್ಕಿಂತ, ನಮ್ಮ ಜೊತೆಗೆ ಬರಲು ತಯಾರಿಲ್ಲ. ಅವಕಾಶ ಕೊಟ್ಟರೆ, ಕಾಡಿಬೇಡಿ ಹೋಗಬೇಕಿದೆ. ಏನಕ್ಕೆ ನಡೆಸಬೇಕು. ಮುಚ್ಚಿಸಲಿ, ಮಾತನಾಡದಲು ತಯಾರಿಲ್ಲ, ಮನವಿ ಮಾಡಲು ತಯಾರಿಲ್ಲ.
‘12 ಸ್ಪರ್ಧಿಗಳ ಪೈಕಿ 7 ಜನರಿಗೆ ಅವಕಾಶ ಸಿಕ್ಕಿದ್ದು, ಮಂಗಳೂರಿಗೆ ಕರೆದೊಯ್ಯುತ್ತಿದ್ದೇನೆ’ ಎಂದು ಗಣೇಶ್ ಎಂಬುವರು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಅಸೋಸಿಯೇಷನ್ ಕಾರ್ಯದರ್ಶಿಯವರೆಗೆ ಮೊಬೈಲ್‌ನಲ್ಲಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.