ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾದ 6 ತಿಂಗಳಲ್ಲೇ ವಿವಾಹಿತೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ

Last Updated 30 ಜೂನ್ 2021, 15:36 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ವರದಕ್ಷಿಣೆ ಕಿರುಕುಳ ಎಂದು ಆರೋಪಿಸಲಾಗಿದೆ.

ಹೊಸ ಕುಂದವಾಡದ ರೂಪಾ (26) ಮೃತಪಟ್ಟವರು. ಹನುಮನಹಳ್ಳಿಯಜಯಪ್ರಕಾಶ ಎಂಬಾತನ ಜೊತೆ 6 ತಿಂಗಳ ಹಿಂದೆ ವಿವಾಹವಾಗಿತ್ತು. ಮದುವೆ ವೇಳೆ 9 ತೊಲ ಬಂಗಾರ, ₹1.15 ಲಕ್ಷ ಸೇರಿ ₹ 3 ಲಕ್ಷ ಖರ್ಚು ಮಾಡಲಾಗಿತ್ತು.

ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಮನೆಯಲ್ಲಿ ಶವ ಪತ್ತೆಯಾಗಿದೆ. ಈ ವೇಳೆ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಗಿಲುಮುಟ್ಟಿತ್ತು.

‘ಪತಿ ಜಯಪ್ರಕಾಶ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ವರದಕ್ಷಿಣೆ ತರುವಂತೆ ಒತ್ತಡ ಹೇರುತ್ತಿದ್ದ.ತವರು ಮನೆಯವರ ಜೊತೆ ಮಾತನಾಡದಂತೆ ಮೊಬೈಲ್ ಒಡೆದು ಹಾಕಿದ್ದ. ಬೇರೆ ಯಾರದ್ದೋ ಕರೆ ಬರುತ್ತಿದೆ ಎಂದು ಪತ್ನಿಯ ಮೇಲೆ ಜಯಪ್ರಕಾಶ ಸಂಶಯ ಪಡುತ್ತಿದ್ದ. ನನ್ನ ಮಗಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ರೂಪಾ ಅವರ ತಂದೆ ಮಂಜಪ್ಪ ಮಾಯಕೊಂಡ ಠಾಣೆಗೆ ದೂರು ನೀಡಿದ್ದಾರೆ.

ಪತಿ ಜಯಪ್ರಕಾಶ ಹಾಗೂ ಆತನ ಸಂಬಂಧಿಕರು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT