ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರಿನ ಮೇರಿ ರಸ್ತೆ: ದಶಕದ ಕನಸು–ನನಸು

Last Updated 31 ಆಗಸ್ಟ್ 2018, 17:37 IST
ಅಕ್ಷರ ಗಾತ್ರ

ಹಿರಿಯೂರು:‘ನಮ್ಮ ಬೀದಿಯ ರಸ್ತೆಯನ್ನು ಮನುಷ್ಯಯೋಗ್ಯ ಸಂಚಾರಕ್ಕೆ ಮಾಡಿ’ ಎಂಬ ನಗರದ ಮೇರಿ ರಸ್ತೆಯ ನಿವಾಸಿಗಳ ದಶಕಗಳ ಕನಸು ನನಸಾಗಿದ್ದು, ಅತ್ಯಂತ ಸುಂದರವಾಗಿರುವ ಫ್ಲೈಯಿಂಗ್ ಟೈಲ್ಸ್ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಅಸಂಷನ್ ಚರ್ಚ್‌ಗೆ ಹೊಂದಿಕೊಂಡಿರುವ ಮೇರಿ ರಸ್ತೆ ನಗರದ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾಗಿದ್ದು, ಬಹುತೇಕ ಕೂಲಿ ಕೆಲಸದವರೇ ಇಲ್ಲಿದ್ದಾರೆ. ಇದೇ ರಸ್ತೆ ವ್ಯಾಪ್ತಿಯಿಂದ ಪುರಸಭೆಗೆ ಇಬ್ಬರು ಸದಸ್ಯರಾಗಿ ಆಯ್ಕೆಯಾಗಿದ್ದರೂ ಚರಂಡಿ ಹಾಗೂ ರಸ್ತೆ ನಿರ್ಮಾಣಗೊಂಡಿರಲಿಲ್ಲ. ಈಗ ನಗರಸಭೆ ನಿಧಿಯಿಂದ ₹ 17 ಲಕ್ಷ ವೆಚ್ಚದಲ್ಲಿ 160 ಮೀ. ಉದ್ದದ ರಸ್ತೆ, ರಸ್ತೆಯ ಎರಡೂ ಬದಿಗೆ ಬಾಕ್ಸ್ ಚರಂಡಿ ನಿರ್ಮಿಸಲಾಗಿದೆ.

ಅಂತಿಮ ಹಂತದ ಕಾಮಗಾರಿಯ ಪ್ರಗತಿಯನ್ನು ವಾರ್ಡ್ ಸದಸ್ಯ ಜಿ. ಪ್ರೇಮ್ ಕುಮಾರ್ ಶುಕ್ರವಾರ ಪರಿಶೀಲಿಸಿದ ನಂತರ, ‘ಇಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಗುಣಮಟ್ಟದ ರಸ್ತೆ ಮಾಡಿಕೊಡಲಾಗಿದೆ. ರಸ್ತೆ ಹಾಳಾಗದಂತೆ ಜನರು ಎಚ್ಚರ ವಹಿಸಬೇಕು. ನೆಲಕ್ಕೆ ಹೊದಿಸಿರುವ ಟೈಲ್ಸ್‌ಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ವಾರ್ಡ್‌ನ ನಿವಾಸಿಗಳಾದ ಸಮಾಜ ಸೇವಕಿ ಶಶಿಕಲಾ ರವಿಶಂಕರ್, ಹಿರಿಯ ವಕೀಲ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT