ದಾವಣಗೆರೆ: ನಗರದ ಹಳೇಭಾಗದಲ್ಲಿ ಭಾರಿ ವಾಹನಗಳಿಗೆ ನಿಷೇಧಿಸಬೇಕೆಂಬ ಜಿಲ್ಲಾಡಳಿತ ತೀರ್ಮಾನವನ್ನು ವ್ಯಾಪಾರಸ್ಥರು ವಿರೋಧಿಸಿದ್ದಾರೆ.

ಚೌಕಿಪೇಟೆ, ಎಂ.ಜಿ.ರಸ್ತೆ ಸೇರಿ ಹಳೆಭಾಗದ ವ್ಯವಹಾರಸ್ಥರು ಭಾನುವಾರ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಅಹವಾಲು ಸಲ್ಲಿಸಿದರು.

ರಾತ್ರಿ ವೇಳೆ ಲೋಡಿಂಗ್, ಆನ್ ಲೋಡಿಂಗ್‌ಗೆ ಹಮಾಲರು ಸಿಗುವುದಿಲ್ಲ. ಇದಲ್ಲದೇ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ವ್ಯಾಪಾರಸ್ಥರು ಶಾಸಕರ ಗಮನಕ್ಕೆ ತಂದರು.

ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿದ ಶಾಸಕರು ತಕ್ಷಣ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈಗಿರುವಂತೆಯೇ ವಾಹನಗಳ ಪ್ರವೇಶವನ್ನು ಮುಂದುವರಿಸುವಂತೆ ಸೂಚನೆ ನೀಡಿದರು.

ಬಲಭದ್ರ ಶೇಟ್, ವಾಸುವೇಲು, ಕೃಷ್ಣಪ್ಪ, ಅನಿಲ್, ಕೆ.ಎಲ್.ಪಿ. ಸ್ವಾಮಿ, ಲಿಂಗರಾಜ್, ಆರ್.ಜಿ. ಸುನಿಲ್, ಬಾಗಿರೇಚಾ, ಪಂಚಣ್ಣ , ಕಕ್ಕರಗೊಳ್ಳ ಗಿರೀಶ್ ಅವರೂ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.