ದಾವಣಗೆರೆ: ‘ಎಲ್ಲೆಡೆ ಮೋದಿ, ಜೈ ಶ್ರೀರಾಮ್ ಜೈಕಾರ ಮುಗಿಲು ಮುಟ್ಟಿತು. ‘ಈ ಬಾರಿ ಮೋದಿ ಸರ್ಕಾರ’ ಘೋಷಣೆಗಳು ಮೊಳಗಿದವು.

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶವೆಲ್ಲಾ ಮೋದಿಮಯದಂತೆ ಗೋಚರಿಸಿತು.

ಬಿರುಬಿಸಿನಲ್ಲಿ ಬಸವಳಿದ ಕಾರ್ಯಕರ್ತರು ಮಧ್ಯಾಹ್ನ ಒಂದು ಗಂಟೆಗೆಲ್ಲಾ ವೇದಿಕೆಯತ್ತ ಧಾವಿಸಿ ಚೇರ್‌ಗಳಲ್ಲಿ ಕುಳಿತರು. ಮ.2ಕ್ಕೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮಕ್ಕೂ ಮುನ್ನ ಮಿಮಿಕ್ರಿ ಗೋಪಿ ಸೇರಿದಂತೆ ವಿವಿಧ ಕಲಾವಿದರು ಹಾಡುಗಳನ್ನು ಹಾಡಿ ಮನರಂಜಿಸಿದರು. ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ಹಾಡಿಗೆ ನೆರೆದಿದ್ದ ಅಭಿಮಾನಿಗಳು ಕುಳಿದು ಕುಪ್ಪಳಿಸಿದರು.

ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಬರುತ್ತಿದ್ದಂತೆ ‘ಮೋದಿ, ‘ಮೋದಿ’ ಘೋಷಣೆ ಮುಗಿಲು ಮುಟ್ಟಿತು. ಪ್ರಧಾನಿ ಮೋದಿ ಅವರ ಭಾಷಣ ಆಲಿಸಲು ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರು. ಸಾವಿರಾರು ಜನರಿಗೆ ಆಸನಗಳನ್ನು ಅಳವಡಿಸಿದ್ದರೆ, ಅದು ಭರ್ತಿಯಾಗಿ ಸಾವಿರಾರು ಮಂದಿ ನಿಂತೇ ಭಾಷಣ ಆಲಿಸಿದರು. ಭಾಷಣದದ ಉದ್ದಕ್ಕೂ ‘ಮೋದಿ ಮೋದಿ’ ಘೋಷಣೆ ಮುಗಿಲು ಮುಟ್ಟುತ್ತಲೇ ಇತ್ತು. ಅಭಿಮಾನಿಗಳ ಅಭಿಮಾನಕ್ಕೆ ತಲೆದೂಗುತ್ತಲೇ ನಿಧಾನವಾಗಿ ಭಾಷಣ ಮುಂದುವರಿಸಿದರು.

ಪ್ರತಿಯೊಬ್ಬರೂ ಕೇಸರಿ ಟೊಪ್ಪಿಗೆಗಳನ್ನು ಹಾಕಿಕೊಂಡು, ಮೋದಿ ಕಟೌಟ್ ಹಿಡಿದು ನೃತ್ಯ ಮಾಡಿದಲ್ಲದೇ ಮೇಲಕ್ಕೆ ಎತ್ತಿ ಪ್ರದರ್ಶಿಸಿದರು. ಕಟೌಟ್ ಪಕ್ಕ ನಿಂತು ಮಹಿಳೆಯರು ಸೆಲ್ಫಿ ತೆಗೆದುಕೊಂಡರು. ವಿದ್ಯಾರ್ಥಿನಿಯೊಬ್ಬಳು ‘ಮೋದಿ ಮತ್ತೊಮ್ಮೆ 400’ ಘೋಷಣೆಯುಳ್ಳ ಚಿತ್ರವನ್ನು ಪ್ರದರ್ಶಿಸಿದಳು. ಕಾರ್ಯಕ್ರಮ ಮುಗಿದ ಬಳಿಕ ಕಾರ್ಯಕರ್ತರು ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.