ಜಿಲ್ಲೆಯಲ್ಲಿ ಜೂನ್ ಮೊದಲ ವಾರದಿಂದ ಬಿತ್ತನೆ ಕಾರ್ಯ ಶುರುವಾಗುವ ಸಾಧ್ಯತೆ ಇದೆ. ರೈತರಿಗೆ ವಿತರಿಸಲು ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ
ಶ್ರೀನಿವಾಸ್ ಚಿಂತಾಲ್ ಜಂಟಿ ನಿರ್ದೇಶಕ ಕೃಷಿ ಇಲಾಖೆ
ನೀರಾವರಿ ಬೋರ್‌ವೆಲ್ ಸೌಲಭ್ಯ ಇರುವ ಪ್ರದೇಶದಲ್ಲಿ ಭತ್ತದ ಕೊಯ್ಲು ನಡೆಯುತ್ತಿದೆ. ಕುಷ್ಕಿ (ಬೆದ್ದಲು) ಜಮೀನುಗಳನ್ನು ಹದ ಮಾಡಿಕೊಳ್ಳಲಾಗಿದ್ದು ಬೀಜ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ಬಿ.ಎಂ.ಷಣ್ಮುಖಯ್ಯ ರೈತ ಆವರಗೊಳ್ಳ
ಈ ಬಾರಿ ಉತ್ತಮ ಮಳೆಯಾಗಿದ್ದು ಜಮೀನುಗಳನ್ನು ಹಸನು ಮಾಡಿಕೊಳ್ಳಲಾಗಿದೆ. ಈರುಳ್ಳಿ ಬೀಜ ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ಮುನಿ ಎಸ್.ಎಂ. ರೈತ ಜಗಳೂರು
₹ 16 ಕೋಟಿ ಅನುದಾನ ಲಭ್ಯ
ಮುಂಗಾರು ಅವಧಿಯಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳಿಂದಾಗುವ ಹಾನಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಖಾತೆಯಲ್ಲಿ ₹ 16 ಕೋಟಿ ಅನುದಾನ ಲಭ್ಯ ಇದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು. ಸಿಡಿಲು ಬಡಿದು ಜೀವಹಾನಿಯಾಗುವುದು ಮನೆ ಶಾಲೆ ಕೊಠಡಿಗಳಿಗೆ ಹಾನಿಯಾಗುವುದು ಬೆಳೆ ಹಾನಿ ಸೇರಿದಂತೆ ಮಳೆಯಿಂದಾಗಿ ಸಂಭವಿಸುವ ಇನ್ನಿತರ ನಷ್ಟಗಳಿಗೆ ಪರಿಹಾರ ನೀಡಲು ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಇದು ಖಾಲಿಯಾದರೆ ಮತ್ತಷ್ಟು ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದರು.