ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ನಾಗರ ಪಂಚಮಿ: ಕಾಣದ ಸಂಭ್ರಮ

Last Updated 24 ಜುಲೈ 2020, 16:55 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಶುಕ್ರವಾರ ನಾಗರಪಂಚಮಿಹಬ್ಬವನ್ನು ಹುತ್ತ, ನಾಗರಮೂರ್ತಿಗೆ ಹಾಲೆರೆಯುವ ಮೂಲಕ ಆಚರಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಈ ಬಾರಿ ಹೆಚ್ಚಿನ ಸಡಗರ ಕಂಡುಬರಲಿಲ್ಲ.

ಕೆಲವೆಡೆ ಇಂದು ಹಬ್ಬ ಆಚರಿಸಿದರೆ ಕೆಲವೆಡೆ ನಾಳೆ ಆಚರಿಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ನಗರದ ಅಲ್ಲಲ್ಲಿ ಮಹಿಳೆಯರು ನಾಗರ ಕಲ್ಲಿಗೆ ಹಾಲು, ನೈವೇದ್ಯ ಅರ್ಪಿಸುತ್ತಿದ್ದುದು ಕಂಡುಬಂತು.

ಹುರದ ಅಳ್ಳು, ಕಡಲೆ ಉಂಡೆ, ಅಳ್ಳಿಟ್ಟಿನ ಉಂಡೆ, ಶೇಂಗಾಉಂಡೆ, ಪಾಯಸ ಸೇರಿ ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಿದರು.

ಬೆಳಿಗ್ಗೆಯಿಂದಲೇ ನಾಗರಕಟ್ಟೆ ಹಾಗೂ ಹುತ್ತಗಳ ಬಳಿ ಕಟುಂಬದ ಸದಸ್ಯರೊಡನೆ ಬಂದ ಮಹಿಳೆಯರು ನಾಗರಕಟ್ಟೆಗಳನ್ನು ಶುಭ್ರಗೊಳಿಸಿ, ಹಾಲಿನಿಂದ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿಹಿ ಖಾದ್ಯಗಳ ನೈವೇದ್ಯ ಅರ್ಪಿಸಿದರು.

ಕೊಬ್ಬರಿ ಬಟ್ಟಲಿನಲ್ಲಿ ನಾಣ್ಯ ಇಟ್ಟು ಅದರಲ್ಲಿ ಹಾಲು ಹಾಕಿನಾಗರಮೂರ್ತಿಗೆ ಹಾಲೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT