ದಾವಣಗೆರೆ: ದೇಶದಾದ್ಯಂತ ಕೋವಿಡ್ ವೈರಸ್ನಿಂದ ರಾಷ್ಟ್ರೀಯ ವಿಪತ್ತು ಎದುರಾಗಿದ್ದು, ಈ ಸಂದರ್ಭದಲ್ಲಿ ಅಂಚೆ ಇಲಾಖೆಯು ನಾಗರಿಕರಿಗೆ ಅಗತ್ಯವಾದ ಸೇವೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಂಡಿದೆ.

ಸಾರ್ವಜನಿಕ ಸಂಪರ್ಕ ಮತ್ತು ಸಾಗಣೆ ಇಲ್ಲದಿರುವುದರಿಂದ ಔಷಧಗಳು ಮತ್ತು ಮೆಡಿಕಲ್ ಉಪಕರಣಗಳನ್ನು ಕಳುಹಿಸುವುದು ಸಾರ್ವಜನಿಕರಿಗೆ ಬಹಳ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯು ಔಷಧಿಗಳು ಒಳಗೊಂಡ ಎಲ್ಲಾ ಪಾರ್ಸಲ್ಗಳನ್ನು ಆದ್ಯತೆಯ ಮೇರೆಗೆ ಸ್ವೀಕರಿಸಿ ವೇಗವಾಗಿ ಬಟವಾಡೆ ಮಾಡಲಿದೆ.

ಸಾರ್ವಜನಿಕರು ಪಾರ್ಸಲ್ ಅನ್ನು ಎಲ್ಲಾ ಅಂಚೆ ಕಚೇರಿಗಳಲ್ಲಿ ಬುಕ್ ಮಾಡಬಹುದು. ಅಂಚೆ ಇಲಾಖೆಯಿಂದ ಮೆಡಿಕಲ್ ಪಾರ್ಸಲ್ಗಳನ್ನು ತ್ವರಿತಗತಿಯಲ್ಲಿ ಬುಕಿಂಗ್ ಹಾಗೂ ಬಟವಾಡೆ ಮಾಡಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.

ಅಂಚೆ ಇಲಾಖೆ ಸೇವೆಗಳು

* ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಯ ಪಾವತಿ, ಪತ್ರ ಸೇವೆ,

*ಪಾರ್ಸಲ್ ಅಗತ್ಯವಾದ ಮೆಡಿಕಲ್ ಸರಬರಾಜು ಹಾಗೂ ಆಹಾರ ವಸ್ತುಗಳ ಬುಕಿಂಗ್ ಹಾಗೂ ಬಟವಾಡೆ,

*ಮನೆಯ ಬಾಗಿಲಿಗೆ ಅಥವಾ ಅಂಚೆ ಕಚೇರಿಯಲ್ಲಿ ಯಾವುದು ಸಾಧ್ಯವೋ ಅ ರೀತಿಯಲ್ಲಿ ಬಟವಾಡೆ

*ಹಣಕಾಸು ಸೇವೆಗಳು- ಹಣ ತುಂಬುವುದು ಮತ್ತು ಹಿಂತೆಗೆಯುವುದು

*ಎಟಿಎಂ ಸೇವೆ, ಮೈಕ್ರೊ ಎಟಿಎಂ ಮುಖಾಂತರ ಗ್ರಾಮೀಣ ಭಾಗದಲ್ಲಿ ಬೇರೆ ಬ್ಯಾಂಕ್ ಖಾತೆಯಿಂದ ಹಣ ಪಡೆಯುವ ವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.